ಹುಬ್ಬಳ್ಳಿಯಲ್ಲಿ ರೊಚ್ಚಿಗೆದ್ದ ಮಾಜಿ ಸಿಸಿ ಪಾಟೀಲ
ಹುಬ್ಬಳ್ಳಿ: ಸಿಎಂ ವಿರುದ್ಧ ಸಿಸಿ ಪಾಟೀಲ ಗರಂ
ಮಾಜಿ ಸಚಿವ ಸಿ. ಸಿ. ಪಾಟೀಲ್ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ಮೂರು ವರ್ಷಗಳಾದರೂ ಶಾಸಕರಿಗೆ ಅನುದಾನ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಇದರಿಂದಾಗಿ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ತಮ್ಮ ಮತದಾರರಿಗೆ ಮುಖ ತೋರಿಸಲು ಆಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.