ಹುಬ್ಬಳ್ಳಿಯಲ್ಲಿ ಮೊನಾರ್ಚ್ ಡೆಕಾರ್ ಸ್ಟುಡಿಯೋ ಶುಭಾರಂಭಕ್ಕೆ ಡಾ.ರಮೇಶ್  ಅವರಿಂದ ಉದ್ಘಾಟನೆ!

ಹುಬ್ಬಳ್ಳಿಯಲ್ಲಿ ಮೊನಾರ್ಚ್ ಡೆಕಾರ್ ಸ್ಟುಡಿಯೋ ಶುಭಾರಂಭಕ್ಕೆ ಡಾ.ರಮೇಶ್  ಅವರಿಂದ ಉದ್ಘಾಟನೆ!

ಹುಬ್ಬಳ್ಳಿ: ಮನೆ ನಿರ್ಮಾಣದ ಕ್ಷೇತ್ರದಲ್ಲಿ ಆಧುನಿಕ ವಿನ್ಯಾಸ ಹಾಗೂ ಉತ್ತಮ ಗುಣಮಟ್ಟದ ಸ್ಟೀಲ್ ಡೋರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ಇದೀಗ ಮೊನಾರ್ಚ್ ಡೆಕಾರ್ ಸ್ಟುಡಿಯೋ ನೂತನವಾಗಿ ಆರಂಭಗೊಂಡಿದೆ.

ಹುಬ್ಬಳ್ಳಿಯ ಚೇತನ ಕಾಲೇಜು ಸಮೀಪ ಆರಂಭಗೊಂಡಿರುವ ಈ ಮಳಿಗೆಯಲ್ಲಿ ವಿವಿಧ ವಿನ್ಯಾಸ ಹಾಗೂ ಆಕರ್ಷಕ ಮಾದರಿಯ ಸ್ಟೀಲ್ ಡೋರ್‌ಗಳು ಗ್ರಾಹಕರಿಗೆ ಲಭ್ಯವಿದ್ದು, ಕೈಗೆಟುಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೊನಾರ್ಚ್ ಡೆಕಾರ್ ಸ್ಟುಡಿಯೋ ಆರಂಭವಾಗಿದ್ದು, ಮನೆ, ಕಚೇರಿ ಸೇರಿದಂತೆ ವಿವಿಧ ಕಟ್ಟಡಗಳಿಗೆ ಅಗತ್ಯವಿರುವ ಗುಣಮಟ್ಟದ ಸ್ಟೀಲ್ ಡೋರ್‌ಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶ ಹೊಂದಿದೆ.

ನೂತನ ಮಳಿಗೆಯನ್ನು ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ  ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಡಾ. ರಮೇಶ್ ಅವರು, ಇಂದಿನ ದಿನಗಳಲ್ಲಿ ಮನೆಗಳ ಸುರಕ್ಷತೆ, ಬಾಳಿಕೆ ಹಾಗೂ ಆಕರ್ಷಕ ವಿನ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಟೀಲ್ ಡೋರ್‌ಗಳು ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿವೆ ಎಂದು ಹೇಳಿದರು.

ಸ್ಟೀಲ್ ಡೋರ್‌ಗಳು ಬಲಿಷ್ಠವಾಗಿರುವುದರ ಜೊತೆಗೆ ದೀರ್ಘಕಾಲ ಬಾಳಿಕೆ ಬರುವ ಗುಣ ಹೊಂದಿದ್ದು, ಮನೆಗೆ ಸುರಕ್ಷತೆಯ ಜೊತೆಗೆ ಆಕರ್ಷಕ ಲುಕ್ ನೀಡುತ್ತವೆ. ಹೀಗಾಗಿ ಮನೆ ನಿರ್ಮಾಣ ಮಾಡುವವರು ಹಾಗೂ ನವೀಕರಣ ಮಾಡುತ್ತಿರುವವರು ಗುಣಮಟ್ಟದ ಸ್ಟೀಲ್ ಡೋರ್‌ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದರು.

ಮೊನಾರ್ಚ್  ಡೆಕಾರ್ ಸ್ಟುಡಿಯೋದಲ್ಲಿ ಉತ್ತಮ ಗುಣಮಟ್ಟ, ಆಕರ್ಷಕ ವಿನ್ಯಾಸ ಹಾಗೂ ಕೈಗೆಟುಕುವ ದರಕ್ಕೆ ಆದ್ಯತೆ ನೀಡಲಾಗಿದ್ದು, ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಮಾದರಿಗಳ ಸ್ಟೀಲ್ ಡೋರ್‌ಗಳನ್ನು ಒದಗಿಸಲಾಗುತ್ತಿದೆ.
ಮಳಿಗೆ ಆರಂಭದ ಸಂದರ್ಭದಲ್ಲಿ ಉದ್ಯಮಿಗಳು, ಗ್ರಾಹಕರು, ಸ್ನೇಹಿತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಒಟ್ಟಾರೆ, ಗುಣಮಟ್ಟದ ಸ್ಟೀಲ್ ಡೋರ್‌ಗಳನ್ನು ಕೈಗೆಟುಕುವ ದರದಲ್ಲಿ ನೀಡುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಗುರಿಯೊಂದಿಗೆ ಮೊನಾರ್ಚ್ ಡೆಕಾರ್ ಸ್ಟುಡಿಯೋ ಹುಬ್ಬಳ್ಳಿಯಲ್ಲಿ ತನ್ನ ಕಾರ್ಯಾರಂಭ ಮಾಡಿದೆ.ಈ ಸಂದರ್ಭದಲ್ಲಿ  ಮುಖಂಡ ಈಶ್ಚರಗೌಡ ಪಾಟೀಲ,ಪಾಲಿಕೆ ಸದಸ್ಯ ವೀನಾ ಬರದವಾಡ್,ಅಬ್ದುಲ್ ಮಜೀದ್,ಇಜಾಸ್ ಅಲಮಾನರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.