Sky World Academyನಲ್ಲಿ ರಕ್ಷಾಬಂಧನ ಸಂಭ್ರಮ: ‘ನಶಾ ಮುಕ್ತ ಭಾರತ’ ಅಭಿಯಾನಕ್ಕೆ ವಿದ್ಯಾರ್ಥಿಗಳ ಸಂಕಲ್ಪ
Sky World Academyನಲ್ಲಿ ರಕ್ಷಾಬಂಧನ ಸಂಭ್ರಮ: ‘ನಶಾ ಮುಕ್ತ ಭಾರತ’ ಅಭಿಯಾನಕ್ಕೆ ವಿದ್ಯಾರ್ಥಿಗಳ ಸಂಕಲ್ಪ l
ಬೆಳಗಾವಿ: ಸ್ಕೈ ವರ್ಲ್ಡ್ ಅಕಾಡೆಮಿಯಲ್ಲಿ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಲಕ್ಷ್ಮೀನಗರ, ಹಿಂಡಲಗಾ ಇವರ ಸಹಯೋಗದಲ್ಲಿ ‘ನಶಾ ಮುಕ್ತ ಭಾರತ ಅಭಿಯಾನ’ ಹಾಗೂ ರಕ್ಷಾಬಂಧನ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.
ರಾಜಯೋಗಿನಿ ಬಿಕೆ ಸುಲೋಚನಾ ಬೆಹನ್ಜಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ಬಿಕೆ ಮನೀಷಾ ಬೆಹನ್ಜಿ, ಬಿಕೆ ವಂದನಾ ಬೆಹನ್ಜಿ ಹಾಗೂ ಬಿಕೆ ನಾರಾಯಣ ಭಾಯಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ರಕ್ಷಾಬಂಧನವು ರಕ್ಷಣೆ, ಪ್ರೀತಿ ಹಾಗೂ ಜವಾಬ್ದಾರಿಯ ಸಂಕೇತವಾಗಿದ್ದು, ಈ ಸಂದೇಶವನ್ನು ‘ನಶಾ ಮುಕ್ತ ಭಾರತ’ ಅಭಿಯಾನದೊಂದಿಗೆ ಜೋಡಿಸಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನಗಳಿಂದ ದೂರವಿರುವಂತೆ ಕರೆ ನೀಡಲಾಯಿತು.
ದೇಶಾದ್ಯಂತ 10 ಕೋಟಿ ಜನರಿಂದ ನಶಾ ಮುಕ್ತ ಭಾರತದ ಸಂಕಲ್ಪ ಪಡೆಯುವ ಮಹಾ ಅಭಿಯಾನದ ಕುರಿತು ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳು ಶಿಸ್ತು, ಏಕತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲಾಯಿತು.
ನಂತರ ವಿದ್ಯಾರ್ಥಿಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಾಂಸ್ಕೃತಿಕ ಮೌಲ್ಯಗಳ ಜೊತೆಗೆ ಸಾಮಾಜಿಕ ಜಾಗೃತಿಯ ಸಂದೇಶ ಸಾರಿದ ಕಾರ್ಯಕ್ರಮ ವಿದ್ಯಾರ್ಥಿಗಳ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಸ್ಕೈ ವರ್ಡ್ ಅಕಾಡೆಮಿ CEO ವಿನೋದ ಬಾಮನಿ ಹಾಗೂ ಅವರ ಧರ್ಮಪತ್ನಿ, ಸೇರಿದಂತೆ ಅಕಾಡೆಮಿಯ ಸಿಬ್ಬಂದಿಗಳು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
yallu