ಉಸ್ಮಾನಾಬಾದ್ ಟೋಲ್ ಗೇಟ್–ತುಳಜಾ ಭವಾನಿ ರಸ್ತೆ ಮಧ್ಯೆ ಖತರ್ನಾಕ್ ಕಳ್ಳರ ಗ್ಯಾಂಗ್: ಹುಬ್ಬಳ್ಳಿಯ ಕುಟುಂಬವೊಂದು ಎಸ್ಕೇಪ್ ಆಗಿದ್ದೇ ರೋಚಕ
ಹುಬ್ಬಳ್ಳಿ: ಮಹಾರಾಷ್ಟ್ರದ ಉಸ್ಮಾನಾಬಾದ್ ಟೋಲ್ ಗೇಟ್ನಿಂದ ತುಳಜಾ ಭವಾನಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಕಳ್ಳರ ಗ್ಯಾಂಗ್ ಸಕ್ರಿಯವಾಗಿದ್ದು, ವಾಹನ ಸವಾರರು ಮತ್ತು ಪ್ರವಾಸಿಗರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಮಡಿವಾಳ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಕುಮಟಾದಿಂದ ಹುಬ್ಬಳ್ಳಿ ಮಾರ್ಗವಾಗಿ ಹೋಗಿದ್ದ ಕುಟುಂಬವೊಂದು ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ಆತಂಕಕಾರಿ ಘಟನೆ ನಡೆದಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ, ಉಸ್ಮಾನಾಬಾದ್ ಟೋಲ್ ಗೇಟ್ ದಾಟಿದ ನಂತರ ತುಳಜಾ ಭವಾನಿ ರಸ್ತೆಯಲ್ಲಿ ಸುಮಾರು 25 ಕಿಲೋಮೀಟರ್ ಸಾಗುವ ಮುನ್ನ ಬೈಕ್ನಲ್ಲಿ ಬಂದ ಕೆಲ ದುಷ್ಕರ್ಮಿಗಳು ಅವರ ಕಾರನ್ನು ಅಡ್ಡಗಟ್ಟಿ ನಿಲ್ಲಿಸಲು ಯತ್ನಿಸಿದ್ದಾರೆ. ಬಳಿಕ ವಾಹನದಲ್ಲಿದ್ದವರ ಬಳಿ ಹಣ ಹಾಗೂ ಚಿನ್ನಾಭರಣ ದರೋಡೆ ಮಾಡುವ ಉದ್ದೇಶದಿಂದ ಬೆದರಿಕೆ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.
ಆದರೆ ಡ್ರೈವರ್ ಗಣಪತಿ ನಾಯ್ಕ , ಹಾಗೂ ವಿನೋದ್ ಪಟಗಾರ ಹಾಗೂ ಯಾತ್ರಾರ್ಥಿಗಳಾದ ಹರಿಶ್ಚಂದ್ರ ಮಡಿವಾಳ,ಹಾಗೂ ಕಮಲಾಕರ ಮಡಿವಾಳ,ಗಣೇಶ ಮಡಿವಾಳ,ಅವರ ಸಮಯಪ್ರಜ್ಞೆ ಮೆರೆದು ವಾಹನ ನಿಲ್ಲಿಸಿದ ಕಳ್ಳರನ್ನ ಹಿಡಿಯಲು ಯತ್ನಿಸಿದ್ದಾರೆ.
ತಮ್ಮ ಪ್ರಯತ್ನ ವಿಫಲವಾಗುತ್ತಿರುವುದನ್ನು ಕಂಡ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಹಾಗೂ ನಷ್ಟ ಸಂಭವಿಸಿಲ್ಲ. ಆದರೆ ಈ ಘಟನೆ ಕುಟುಂಬದ ಸದಸ್ಯರಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು.
ಈ ಮಾರ್ಗದಲ್ಲಿ ಇದೇ ರೀತಿಯ ಘಟನೆಗಳು ಹಿಂದಿನ ವರ್ಷ ಇದೆ ಟೆಂಪೋ ಟ್ರಾವೆಲ್ಲರ್ ನಲ್ಲಿ ನಡೆದಿದ್ದು ಯಾತ್ರಾರ್ಥಿಗಳ ಸಾಮಾನುಗಳ ಲೂಟಿ ಮಾಡಿದ್ದರು ಹಾಗೂ ಕರ್ನಾಟಕದ ಕೆಲವು ಗಾಡಿಗಳನ್ನು ಲೂಟಿ ಮಾಡಿರುವ ಮಾಹಿತಿ ದೊರೆತಿದೆ ಎಂದು ಕುಟುಂಬಸ್ಥರು ಹೇಳಿದ್ದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ವಾಹನಗಳನ್ನು ಅನಗತ್ಯವಾಗಿ ನಿಲ್ಲಿಸದಂತೆ ಸಲಹೆ ನೀಡಿದ್ದಾರೆ.
ಅಪರಿಚಿತರು ವಾಹನ ತಡೆಯಲು ಯತ್ನಿಸಿದರೆ ಎಚ್ಚರಿಕೆಯಿಂದ ವರ್ತಿಸಿ, ಅಗತ್ಯವಿದ್ದರೆ ಸಮೀಪದ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರತಿನಿತ್ಯ ನೂರಾರು ಭಕ್ತರು ಹಾಗೂ ಪ್ರವಾಸಿಗರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದ್ದರಿಂದ ಈ ರಸ್ತೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ, ಕಳ್ಳರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಉಸ್ಮಾನಾಬಾದ್ ಟೋಲ್ ಗೇಟ್–ತುಳಜಾ ಭವಾನಿ ರಸ್ತೆ ಮಾರ್ಗದಲ್ಲಿ ಸಂಚರಿಸುವ ಕರ್ನಾಟಕದ ವಾಹನ ಸವಾರರು ಮತ್ತು ಪ್ರವಾಸಿಗರು ಹೆಚ್ಚಿನ ಎಚ್ಚರಿಕೆಯಿಂದ ಪ್ರಯಾಣಿಸಿ, ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ...
yallu