ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ನಾಗರಾಜ ಗೌರಿ ಅವರಿಂದ ಮಹಾರುದ್ರಾಭಿಷೇಕ!

ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ನಾಗರಾಜ ಗೌರಿ ಅವರಿಂದ ಮಹಾರುದ್ರಾಭಿಷೇಕ!

ಉಳವಿ: ಶ್ರಾವಣ ಮಾಸದ ಪವಿತ್ರ ನಿಮಿತ್ತ ಕಾಂಗ್ರೆಸ್ ಯುವ ಮುಖಂಡ ನಾಗರಾಜ್ ಗೌರಿ ಅವರು ಕುಟುಂಬ ಸಮೇತರಾಗಿ ಶ್ರೀಕ್ಷೇತ್ರ ಉಳವಿಯ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರದ್ಧಾ-ಭಕ್ತಿಯಿಂದ ಮಹಾರುದ್ರಾಭಿಷೇಕ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ನಾಗರಾಜ್ ಗೌರಿ ಅವರು, ಮಠದ ಗುರುಗಳಿಂದ ಆಶೀರ್ವಾದ ಪಡೆದರು.
ಬಳಿಕ ರಾಜ್ಯದಲ್ಲಿ ಉತ್ತಮ ಮಳೆಯಾಗಿ, ರೈತರಿಗೆ ಅನುಕೂಲವಾಗಬೇಕು. ರೈತರ ಸಂಕಷ್ಟಗಳು ದೂರವಾಗಿ, ಕೃಷಿ ಚಟುವಟಿಕೆಗಳು ಸಮೃದ್ಧಿಯಾಗಬೇಕು ಎಂದು ಶ್ರೀ ಚನ್ನಬಸವೇಶ್ವರನಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು.

ಶ್ರಾವಣ ಮಾಸದ ಈ ಪವಿತ್ರ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಭಕ್ತಿ ಮೆರೆದರು.