ರಾಖಿ ಕಟ್ಟಿದ ತಂಗಿಗೆ ಹನುಮಾನ್ ಮೂರ್ತಿ ಗಿಫ್ಟ್! “ನನ್ನ ಜೊತೆ ಹನುಮಂತ ಇದ್ದೇ ಇರ್ತಾನೆ, ನಿನ್ನ ರಕ್ಷಣೆ ನನ್ನ ಕರ್ತವ್ಯ” ಎಂದ ಅಣ್ಣ
ಹುಬ್ಬಳ್ಳಿ: ರಕ್ಷಾ ಬಂಧನ ಹಬ್ಬ ಅಣ್ಣ-ತಂಗಿಯರ ನಡುವಿನ ಪ್ರೀತಿ, ವಿಶ್ವಾಸ ಹಾಗೂ ರಕ್ಷಣೆಯ ಸಂಕೇತ. ಇದೇ ಭಾವನೆಯನ್ನು ವಿಭಿನ್ನವಾಗಿ ಸಾರುವ ಮನಮಿಡಿಯುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪ ಅವರ ಪುತ್ರ, ರಕ್ಷಾ ಬಂಧನದ ಹಿನ್ನೆಲೆಯಲ್ಲಿ ತನ್ನ ತಂಗಿಯಿಂದ ರಾಖಿ ಕಟ್ಟಿಸಿಕೊಂಡ ಬಳಿಕ ಆಕೆಗೆ ವಿಶೇಷ ಉಡುಗೊರೆಯಾಗಿ ಹನುಮಾನ್ ದೇವರ ಮೂರ್ತಿಯನ್ನು ನೀಡಿದ್ದಾರೆ.
ತಂಗಿಗೆ ಹನುಮಾನ್ ಮೂರ್ತಿ ನೀಡುವ ಸಂದರ್ಭದಲ್ಲಿ, “ನಿನ್ನನ್ನು ಯಾವಾಗಲೂ ಚೆನ್ನಾಗಿ ಕಾಯಲು ನನ್ನ ಜೊತೆ ಹನುಮಂತ ಇದ್ದೇ ಇರ್ತಾನೆ. ನಿನ್ನ ರಕ್ಷಣೆ ನನ್ನ ಕರ್ತವ್ಯ” ಎಂಬ ಭಾವನೆಯನ್ನು ಅಣ್ಣ ವ್ಯಕ್ತಪಡಿಸಿದ್ದಾರೆ.
ಅಣ್ಣ-ತಂಗಿಯ ನಡುವಿನ ಪ್ರೀತಿ, ಕಾಳಜಿ ಹಾಗೂ ರಕ್ಷಣೆಯ ಸಂಕೇತವಾಗಿ ಮೂಡಿಬಂದಿರುವ ಈ ಕ್ಷಣದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ರಾಖಿಯ ಮೂಲಕ ತಂಗಿ ಅಣ್ಣನ ಕೈಗೆ ಪ್ರೀತಿಯ ಬಂಧನ ಕಟ್ಟಿದರೆ, ಅಣ್ಣ ಹನುಮಂತನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿ “ನಿನ್ನ ರಕ್ಷಣೆ ನನ್ನ ಜವಾಬ್ದಾರಿ” ಎಂಬ ಸಂದೇಶ ಸಾರಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
yallu