ಹುಬ್ಬಳ್ಳಿ–ಕೊಪ್ಪಿಕರ್ ರಸ್ತೆಯ ಯುರೇಕಾ ಟವರ್ ಕಾಂಪ್ಲೆಕ್ಸ್ ಎದುರಿನ ಫುಟ್‌ಪಾತ್ ಮೇಲಿನ ಅಂಗಡಿಗಳ ತೆರವು

ಹುಬ್ಬಳ್ಳಿ–ಕೊಪ್ಪಿಕರ್ ರಸ್ತೆಯ ಯುರೇಕಾ ಟವರ್ ಕಾಂಪ್ಲೆಕ್ಸ್ ಎದುರಿನ ಫುಟ್‌ಪಾತ್ ಮೇಲಿನ ಅಂಗಡಿಗಳ ತೆರವು

ಹುಬ್ಬಳ್ಳಿ–ಕೊಪ್ಪಿಕರ್ ರಸ್ತೆಯ ಯುರೇಕಾ ಟವರ್ ಕಾಂಪ್ಲೆಕ್ಸ್ ಎದುರಿನ ಫುಟ್‌ಪಾತ್ ಮೇಲಿನ ಅಂಗಡಿ ತೆರವು
ಹುಬ್ಬಳ್ಳಿ–ಕೊಪ್ಪಿಕರ್ ರಸ್ತೆಯಲ್ಲಿರುವ ಯುರೇಕಾ ಟವರ್ ಕಾಂಪ್ಲೆಕ್ಸ್ ಎದುರು ಫುಟ್‌ಪಾತ್ ಮೇಲೆ ಅಕ್ರಮವಾಗಿ ಹಚ್ಚಲಾಗಿದ್ದ ಅಂಗಡಿಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

*ದಿ ನ್ಯೂಸ್ ಒನ್ ಸುದ್ದಿ* ವಾಹಿನಿಯಲ್ಲಿ ಈ ಕುರಿತು ವರದಿ ಪ್ರಸಾರವಾದ ತಕ್ಷಣವೇ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡು ಅಂಗಡಿಯನ್ನು ತೆರವುಗೊಳಿಸಿದರು.
ಈ ವೇಳೆ ಫುಟ್‌ಪಾತ್ ಮೇಲೆ ಅಕ್ರಮವಾಗಿ ಅಂಗಡಿಗಳನ್ನು ಹಚ್ಚುವವರ ವಿರುದ್ಧ ಮುಂದೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಅಕ್ರಮ ಅಂಗಡಿಯನ್ನು ತೆರವುಗೊಳಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದು, ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.