ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಅಜ್ಜಿ ತಲೆ ಮೇಲೆ ಬಿದ್ದ ರಾಡ್!

ಹುಬ್ಬಳ್ಳಿಯಲ್ಲಿ  ಫ್ಲೈ ಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಅಜ್ಜಿ ತಲೆ ಮೇಲೆ ಬಿದ್ದ ರಾಡ್!

ಹುಬ್ಬಳ್ಳಿ: ನಗರದ ಹೊಸೂರ ವೃತ್ತದ ಕೆನರಾ ಹೋಟೆಲ್ ಹತ್ತಿರ ವೃದ್ಧೆಯೊಬ್ಬರು ನಡೆದು ಹೋಗುವಾಗ ಅವರ ಮೇಲೆ ಮೇಲ್ಸೇತುವೆ ರಾಡ್‌ವೊಂದು ಬಿದ್ದು, ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಹಾವೇರಿಯ ಯಶೋಧಾ ಜಾದವ(೭೪)ಗಾಯಗೊಂಡಿದ್ದಾರೆ. ಹಾವೇರಿಯಿಂದ ನವನಗರದಲ್ಲಿರುವ ಮಗಳ ಮನೆಗೆ ಹೋಗಲು ನಗರಕ್ಕೆ ಬಂದಿದ್ದರು. ಹೊಸೂರು ವೃತ್ತದ ಬಸ್‌ನಿಲ್ದಾಣದಿಂದ ನವನಗರ ಬಸ್ ಹತ್ತಲು ಹೋಗುವಾಗ ಮೇಲ್ಸೇತುವೆ ಮೇಲಿಂದ ರಾಡ್ ಬಿದ್ದು, ಮೂಗಿನ ಮೇಲೆ ಗಾಯವಾಗಿದೆ. ನಗರದ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಾಲ್ಕು ಹೊಲಿಗೆ ಬಿದ್ದಿವೆ ಎಂದು ವಿದ್ಯಾನಗರ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ.