"ನೂತನ ಮಹಾಪೌರ ದುರ್ಗಮ್ಮ ಬಿಜವಾಡರಿಗೆ ಬೆಂಗೇರಿ ಗ್ರಾಮಸ್ಥರಿಂದ ಅದ್ದೂರಿ ಸನ್ಮಾನ ಶುಭ ಹಾರೈಕೆ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮಹಾಪೌರರಾದ ಶ್ರೀಮತಿ ದುರ್ಗಮ್ಮ ಶಶಿಕಾಂತ್ ಬಿಜವಾಡ ಅವರಿಗೆ ಬೆಂಗೇರಿ ಸಮಸ್ತ ಗ್ರಾಮಸ್ಥರ ವತಿಯಿಂದ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಾಪೌರರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿ ಶುಭಾಶಯಗಳನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಬೀರಪ್ಪ ಕಂಡೇಕಾರ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೂವಪ್ಪ ದಾಯಗೋಡಿ, ಅಧ್ಯಕ್ಷರಾದ ಶ್ರೀ ರಾಜು ಕಾಳೆ, ಶ್ರೀ ಅಶೋಕ್ ವಾಲ್ಮೀಕಿ, ಶ್ರೀ ಶಶಿಕಾಂತ್ ಬಿಜವಾಡ, ಶ್ರೀ ಗುರುಸಿದ್ದಪ್ಪ ಕುಂದಗೋಳ, ಶ್ರೀ ಕಲ್ಲಪ್ಪ ಹೊಸಮನಿ, ಶ್ರೀ ಬೊಮ್ಮನಹಳ್ಳಿ ದಂಪತಿಗಳು ಸೇರಿದಂತೆ ಅನೇಕ ಗಣ್ಯರು ಹಾಗೂ ಬೆಂಗೇರಿ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಈ ವೇಳೆ ಮಾತನಾಡಿದ ಗಣ್ಯರು, ಮಹಾಪೌರರಾದ ಶ್ರೀಮತಿ ದುರ್ಗಮ್ಮ ಶಶಿಕಾಂತ್ ಬಿಜವಾಡ ಅವರ ಅವಧಿಯಲ್ಲಿ ಜನಸೇವೆ ಮತ್ತಷ್ಟು ವಿಸ್ತರಿಸಿ, ಹುಬ್ಬಳ್ಳಿ-ಧಾರವಾಡ ನಗರದ ಸಮಗ್ರ ಅಭಿವೃದ್ಧಿಗೆ ಹೊಸ ಮೈಲಿಗಲ್ಲುಗಳು ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
yallu