ಕಾಂಗ್ರೆಸ್ ಪಕ್ಷದಿಂದ ಗಿರೀಶ್ ಗದಿಗೆಪ್ಪಗೌಡರಿಗೆ 6 ವರ್ಷ ಉಚ್ಚಾಟನೆ: ಜಿಲ್ಲಾಧ್ಯಕ್ಷ ಅಲ್ತಾಪ್ ಅಳ್ಳೂರ ಆದೇಶ!
ಕಾಂಗ್ರೆಸ್ ಪಕ್ಷದಿಂದ ಗಿರೀಶ್ ಗದಿಗೆಪ್ಪಗೌಡರಿಗೆ 6 ವರ್ಷ ಉಚ್ಚಾಟನೆ
ಹುಬ್ಬಳ್ಳಿ, ಜೂ. 25: ಪಕ್ಷ ವಿರೋಧಿ ಚಟುವಟಿಕೆಗಳು ಹಾಗೂ ಶಿಸ್ತು ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಗಿರೀಶ್ ಗದಿಗೆಪ್ಪಗೌಡ ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ.
ಪಕ್ಷದ ಶಿಸ್ತು ಸಮಿತಿಯು ನಡೆಸಿದ ಸಮಗ್ರ ಪರಿಶೀಲನೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದ್ದು, ಸಮಾಜದಲ್ಲಿ ಹಾಗೂ ಸಾರ್ವಜನಿಕವಾಗಿ ತೋರಿದ ಅಶಿಸ್ತಿನ ವರ್ತನೆ ಮತ್ತು ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಕುರಿತು ಗಂಭೀರ ದೂರುಗಳು ಬಂದಿದ್ದವು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪಕ್ಷದ ಹಿರಿಯ ನಾಯಕರ ನಿರ್ದೇಶನದ ಮೇರೆಗೆ ಈ ಕ್ರಮ ಜರುಗಿದ್ದು, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಅನುಮೋದನೆ ಪಡೆದು ಉಚ್ಚಾಟನೆ ಆದೇಶ ಹೊರಡಿಸಲಾಗಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ನೀಡಿರುವ ಈ ಆದೇಶದ ಪ್ರಕಾರ, ಗಿರೀಶ್ ಗದಿಗೆಪ್ಪಗೌಡರು ಕಾಂಗ್ರೆಸ್ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ.
yallu