ಹುಬ್ಬಳ್ಳಿ: ಕಳ್ಳತನ ಪ್ರಕರಣ ಇನ್ನೂ ಪತ್ತೆಯಾಗದ ಕಳ್ಳರ ಸುಳಿವು " ಆತಂಕದಲ್ಲಿ ಜನ್ರು?

ಹುಬ್ಬಳ್ಳಿ: ಕಳ್ಳತನ ಪ್ರಕರಣ ಇನ್ನೂ ಪತ್ತೆಯಾಗದ ಕಳ್ಳರ ಸುಳಿವು " ಆತಂಕದಲ್ಲಿ ಜನ್ರು?

ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆಯ ಕೂಗುಳತೆಯಲ್ಲಿಯೇ ನಡೆದ ಹೋಟೆಲ್ ಉದ್ಯಮಿ ಮನೆ ಕಳ್ಳತನ ನಡೆದು ಮೂರು ದಿನವಾದರೂ ಪೊಲೀಸರಿಗೆ ಆರೋಪಿಗಳ ಸುಳಿವು ಪತ್ತೆಯಾಗದಿರುವುದು ಪೊಲೀಸರ ಕಾರ್ಯವೈಖರೆ ಬಗ್ಗೆ ಜನರಲ್ಲಿ ಆತಂಕ ಮೂಡಿಸಿದೆ.

ಕೇಶ್ವಾಪುರ ಠಾಣೆಯ ವ್ಯಾಪ್ತಿಯ ನವೀನ ಪಾರ್ಕ್ ಪ್ರತಿಷ್ಠಿತರು ಇರುವ ಪ್ರದೇಶವಾಗಿದೆ. ಇಂತಹ ಪ್ರದೇಶದಲ್ಲಿ ಪೊಲೀಸ್ ಠಾಣೆ ಇದ್ದರೂ ಹೋಟೆಲ್ ಉದ್ಯಮಿ ಬಾಲಕೃಷ್ಣ ಶೆಟ್ಟಿ ಅವರ ಮನೆಯಲ್ಲಿ 7.50 ಲಕ್ಷ ನಗದು ಕಳ್ಳತನ ಮಾಡಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಇನ್ನೂ ಜೂನ್ 9 ಕ್ಕೆ ಘಟನೆ ನಡೆದರೂ ಇದುವರೆಗೂ ಕಳ್ಳರ ಸುಳಿವು ಮಾತ್ರ ಸಿಕ್ಕಿಲ್ಲ. ಪೊಲೀಸರು ಸಿಸಿಟಿವಿ ಜಾಲಾಡಿದರೂ ಕಳ್ಳರ ಸುಳಿವು ಸಿಗದಿರುವುದು ತಲೆನೋವಾಗಿ ಪರಿಣಮಿಸಿದೆ. ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ.

ಒಟ್ನಲ್ಲಿ‌ ಇಂತಹ ಪ್ರಕರಣವನ್ನು ಬಹುಬೇಗ ಬೇದಿಸುವ ಕೆಲಸ ಮಾಡಬೇಕು ಇಲ್ಲವಾದರೆ ಜನರಲ್ಲಿ ಇನ್ನೂ ಆತಂಕ ಮನೆ ಮಾಡುತ್ತೇ..