ನೂತನ ಮೇಯರ್ ದುರ್ಗಮ್ಮಾ ಬಿಜವಾಡರಿಗೆ ಕಾಂಗ್ರೆಸ್ ಯುವ ನಾಯಕಿ ದೇವಕಿ ಯೋಗಾನಂದರಿಂದ ಆತ್ಮೀಯ ಸನ್ಮಾನ"

ನೂತನ ಮೇಯರ್ ದುರ್ಗಮ್ಮಾ ಬಿಜವಾಡರಿಗೆ ಕಾಂಗ್ರೆಸ್ ಯುವ ನಾಯಕಿ ದೇವಕಿ ಯೋಗಾನಂದರಿಂದ ಆತ್ಮೀಯ ಸನ್ಮಾನ"

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಶ್ರೀಮತಿ ದುರ್ಗಮ್ಮಾ ಬಿಜವಾಡ ಅವರಿಗೆ ಕಾಂಗ್ರೆಸ್ ಯುವ ನಾಯಕಿ ದೇವಕಿ ಯೋಗಾನಂದ ಅವರ ನೇತೃತ್ವದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾಂಗ್ರೆಸ್ ನಾಯಕಿ ದೇವಕಿ ಯೋಗಾನಂದ  ನಿವಾಸದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಮೇಯರ್ ದುರ್ಗಮ್ಮಾ ಬಿಜವಾಡ ಅವರಿಗೆ ಸಂಪ್ರದಾಯದಂತೆ ಅರಿಸಿನ ಕುಂಕುಮ ಹಾಗೂ ಹೂವು  ನೀಡಿ ಸ್ವಾಗತ ಕೋರಿದರು. ಬಳಿಕ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಅಭಿನಂದಿಸಲಾಯಿತು. ನಗರದ ಅಭಿವೃದ್ಧಿಗೆ ಸಮರ್ಪಿತವಾಗಿ ಕಾರ್ಯನಿರ್ವಹಿಸಿ ಜನರ ನಿರೀಕ್ಷೆಗಳನ್ನು ಈಡೇರಿಸಲಿ ಎಂದು ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ನಾಯಕಿ ದೇವಕಿ ಯೋಗಾನಂದ, "ದುರ್ಗಮ್ಮಾ ಬಿಜವಾಡ ಅವರ ನೇತೃತ್ವದಲ್ಲಿ ಹುಬ್ಬಳ್ಳಿ–ಧಾರವಾಡ ನಗರ ಮತ್ತಷ್ಟು ಅಭಿವೃದ್ಧಿಯತ್ತ ಸಾಗಲಿದೆ ಎಂಬ ವಿಶ್ವಾಸವಿದೆ. ಜನಸೇವೆಗೆ ಅವರು ಉತ್ತಮ ಕೆಲಸ ಮಾಡಲಿ" ಎಂದು ಆಶಯ ವ್ಯಕ್ತಪಡಿಸಿದರು.

ಈ ವಿಶೇಷ ಸಮಯದಲ್ಲಿ ಹನುಮಂತ ನಗರ ಹಾಗೂ ಕಿರತನಾ ಪಾರ್ಕ್ ಮಹಿಳಾ ಮಂಡಳದವ್ರು , ಮೇಯರ್ ದುರ್ಗಮ್ಮಾ ಅವರಿಗೆ ಮತ್ತು ಮಹಾನಗರ ಪಾಲಿಕೆ ಸದಸ್ಯೆ ಸುನಿತಾ ಅವರಿಗೂ ಸಹ ಸನ್ಮಾನ ಮಾಡಿ ಕೀರ್ತನ ಪಾರ್ಕ್ ನ್ನು ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದು, ನೂತನ ಮೇಯರ್ ಅವರಿಗೆ ಅಭಿನಂದನೆ ಸಲ್ಲಿಸಿದರು.