ಶ್ರೀ ಕರಿಯಮ್ಮ ದೇವಿ ದರ್ಶನ ಪಡೆದ ಡಾ.ರಮೇಶ್ ಮಹಾದೇವಪ್ಪನವರ ಹಾಗೂ ಸ್ನೇಹಿತರು

ಶ್ರೀ ಕರಿಯಮ್ಮ ದೇವಿ ದರ್ಶನ ಪಡೆದ ಡಾ.ರಮೇಶ್ ಮಹಾದೇವಪ್ಪನವರ ಹಾಗೂ ಸ್ನೇಹಿತರು

ಹುಬ್ಬಳ್ಳಿ: ನಗರದ ಗಾಮನಗಟ್ಟಿಯ ಪ್ರಸಿದ್ಧ ಶ್ರೀ ಕರಿಯಮ್ಮ ದೇವಿಯ ಪವಿತ್ರ ಸನ್ನಿಧಿಗೆ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ತಮ್ಮ ಗೆಳೆಯರ ಬಳಗದೊಂದಿಗೆ ಭೇಟಿ ನೀಡಿ, ತಾಯಿಯ ದಿವ್ಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


ಈ ವೇಳೆ ದೇವಿಯ ಕೃಪೆ ಸಮಸ್ತ ಜನರ ಮೇಲೂ ಸದಾ ಇರಲಿ ಎಂದು ಪ್ರಾರ್ಥಿಸಿದ ಡಾ. ರಮೇಶ್ ಮಹಾದೇವಪ್ಪನವರ, ರಾಜ್ಯ ಹಾಗೂ ದೇಶದಲ್ಲಿ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ನೆಲೆಸಲಿ ಎಂದು ತಾಯಿಯಲ್ಲಿ ಬೇಡಿಕೊಂಡರು.


ಭಕ್ತಿಯಿಂದ ಸಲ್ಲಿಸಿದ ಪ್ರಾರ್ಥನೆಗೆ ತಾಯಿ ಕರಿಯಮ್ಮನ ಆಶೀರ್ವಾದ ಸದಾ ಲಭಿಸಲಿ ಎಂದು ಆಶಿಸಿ, ದೇವಾಲಯದಲ್ಲಿ ಕೆಲಕಾಲ ಭಕ್ತಿಭಾವದಿಂದ ಕಾಲ ಕಳೆಯಲಾಯಿತು. ಅವರೊಂದಿಗೆ ಸ್ನೇಹಿತರು ಸಹ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.