"2055ನೇ ಮದ್ಯವರ್ಜನ ಶಿಬಿರದ ಯಶಸ್ಸಿಗೆ" ಡಾ. ರಮೇಶ್ ಮಹಾದೇವಪ್ಪನವರಿಗೆ ಅಭಿನಂದನಾ ಪತ್ರ

Hubli news

"2055ನೇ ಮದ್ಯವರ್ಜನ ಶಿಬಿರದ ಯಶಸ್ಸಿಗೆ" ಡಾ. ರಮೇಶ್ ಮಹಾದೇವಪ್ಪನವರಿಗೆ ಅಭಿನಂದನಾ ಪತ್ರ

 ಹುಬ್ಬಳ್ಳಿ:- 2055ನೇ ಮದ್ಯವರ್ಜನ ಶಿಬಿರದ ಯಶಸ್ಸಿಗೆ ಡಾ. ರಮೇಶ್ ಮಹಾದೇವಪ್ಪನವರಿಗೆ ಅಭಿನಂದನಾ ಪತ್ರ
ಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹುಬ್ಬಳ್ಳಿ ಗ್ರಾಮೀಣದ ಸಹಯೋಗದಲ್ಲಿ ಯಶಸ್ವಿಯಾಗಿ ನಡೆದ 2055ನೇ ಮದ್ಯವರ್ಜನ ಶಿಬಿರದ ಯಶಸ್ಸಿನ ಅಂಗವಾಗಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.


ಸಮಾಜದ ಒಳಿತಿಗಾಗಿ, ಜನಜಾಗೃತಿ ಮೂಡಿಸಲು ಹಾಗೂ ಉತ್ತಮ ಬದುಕಿನ ನಿರ್ಮಾಣಕ್ಕಾಗಿ ಹಮ್ಮಿಕೊಂಡ ಈ ಶಿಬಿರವು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರ ಸಹಕಾರ, ಪ್ರೋತ್ಸಾಹ ಮತ್ತು ಆಶೀರ್ವಾದಕ್ಕೆ ಡಾ. ರಮೇಶ್ ಮಹಾದೇವಪ್ಪನವರು ಕೃತಜ್ಞತೆ ಸಲ್ಲಿಸಿದರು.


“ಈ ಗೌರವವು ಕೇವಲ ನನಗಷ್ಟೇ ಸಲ್ಲುವುದಿಲ್ಲ. ಸಮಾಜ ಸೇವೆಯ ಹಾದಿಯಲ್ಲಿ ಶ್ರಮಿಸಿದ ಎಲ್ಲ ಕಾರ್ಯಕರ್ತರು, ಸಂಘಟಕರು ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ಸಲ್ಲುವ ಗೌರವವಾಗಿದೆ” ಎಂದು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಸೋಮಲಿಂಗ ಪಿರಾಜಿ ಕಂಡೇಕರ್, ಮಾರುತಿ ಸೇಟ್, ಹೆಬ್ಬಳ್ಳಿ, ಹಲವಾರು ಗಣ್ಯರು ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದು, ಶಿಬಿರದ ಯಶಸ್ಸಿಗೆ ಕಾರಣರಾದವರನ್ನು ಅಭಿನಂದಿಸಿದರು.