ಸಿಡಲಿನ ಅಬ್ಬರಕ್ಕೆ ಶೋರೂಮ್ ಗ್ಲಾಸ್ ಪುಡಿ ಪುಡಿ!
ಹುಬ್ಬಳ್ಳಿಯಲ್ಲಿ ಸುರಿದ ಭಾರೀ ಗಾಳಿ ಮಳೆಯ ಅವಾಂತರಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಬಿರುಗಾಳಿಯ ಅಬ್ಬರಕ್ಕೆ ನಗರದ ಬೆಲ್ಲದ್ ಶೋರೂಂನ ಗ್ಲಾಸ್ ಸಂಪೂರ್ಣ ಪುಡಿ ಪುಡಿಯಾಗಿದ್ದು, ಸಿಡಿಲಿನ ಹೊಡೆತದ ಪರಿಣಾಮ ಗ್ಲಾಸ್ ಜಿಗಿದು ಸಿಬ್ಬಂದಿಗಳ ಮೇಲೆಯೇ ಬಿದ್ದ ಭಯಾನಕ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಬೆಚ್ಚಿಬೀಳಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಹ ಹುಬ್ಬಳ್ಳಿಯಲ್ಲಿ ಇಂದು ಸಂಜೆ ಸುರಿದ ಭಾರೀ ಗಾಳಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ.
ನಗರದ ಪ್ರಮುಖ ಪ್ರದೇಶದಲ್ಲಿರುವ ಬೆಲ್ಲದ್ ಶೋರೂಂನಲ್ಲಿ ಏಕಾಏಕಿ ಸಿಡಿಲಿನ ಭಾರೀ ಶಬ್ದ ಕೇಳಿಬಂದಿದ್ದು, ಅದರ ಬೆನ್ನಲ್ಲೇ ಶೋರೂಂನ ಮುಂಭಾಗದ ಗ್ಲಾಸ್ ಜೋರಾಗಿ ಚೂರಾಗಿಬಿದ್ದಿದೆ.
ಗ್ಲಾಸ್ ಪುಡಿಯಾದ ರಭಸಕ್ಕೆ ಒಳಗಿದ್ದ ಸಿಬ್ಬಂದಿಗಳು ಕೆಲಕಾಲ ಆತಂಕಕ್ಕೊಳಗಾಗಿದ್ದಾರೆ. ಕೆಲವರ ಮೇಲೂ ಗ್ಲಾಸ್ ಚೂರುಗಳು ಬಿದ್ದಿದ್ದರೂ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಘಟನೆಯ ಕ್ಷಣಗಳು ಶೋರೂಂನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗ್ಲಾಸ್ ಏಕಾಏಕಿ ಒಡೆದು ಬೀಳುವ ದೃಶ್ಯ ನೋಡಿದವರು ಬೆಚ್ಚಿಬಿದ್ದಿದ್ದಾರೆ.
yallu