ಪ್ರಸಾದ್ ಅಬ್ಬಯ್ಯ ಗೆ ಸಚಿವ ಸ್ಥಾನ ನೀಡುವಂತೆ ಪಿನಾಯಿಲ್ ಕುಡಿದ  ಅಭಿಮಾನಿ

ಪ್ರಸಾದ್ ಅಬ್ಬಯ್ಯ ಗೆ ಸಚಿವ ಸ್ಥಾನ ನೀಡುವಂತೆ ಪಿನಾಯಿಲ್ ಕುಡಿದ  ಅಭಿಮಾನಿ

ಹುಬ್ಬಳ್ಳಿ: ಶಾಸಕ ಪ್ರಸಾದ್ ಅಬ್ಬಯ್ಯ ಗೆ ಸಚಿವ ಸ್ಥಾನ ನೀಡುವಂತೆ ಪಿನಾಯಿಲ್ ಕುಡಿದ  ಅಭಿಮಾನಿ


ಹುಬ್ಬಳ್ಳಿಯ ಇಂದಿರಾ ನಗರ ನಿವಾಸಿ ನಾಗರಾಜುನ್ ಕತ್ರಿಮಾಳದ ಅವರು, ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಪಿನಾಯಿಲ್ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ ಘಟನೆ ನಡೆದಿದೆ.


ಹೌದು, ಜನಪ್ರಿಯ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತಿರುವ ವೇಳೆ  ಅಭಿಮಾನಿ ಪಿನಾಯಿಲ್ ಕುಡಿದ ಆತಂಕ ಸೃಷ್ಟಿಸಿದ್ದಾರೆ.ಇನ್ನೂ 
ಘಟನೆ ನಡೆದ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಯುವ ಮುಖಂಡ ಕಾಶೀಂ ಕುಡಲಗಿ ಅವರು ತಕ್ಷಣವೇ
ನಾಗಾರ್ಜುನ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಸಮಯೋಚಿತ ಕ್ರಮದ ಮೂಲಕ ಅವರ ಜೀವವನ್ನು ರಕ್ಷಿಸಿದ್ದಾರೆ.


ಇನ್ನೂ ಘಟನೆಯಲ್ಲಿ ಇನ್ನೊಬ್ಬ ಮುಖಂಡ ರಾಹುಲ್‌ ಬಲದೊಡಿ ಎಂಬಾತನ ಕಣ್ಣಿಗೆ ಪಿನಾಯಿಲ್ ಸಿಡಿದಿದ್ದು ಆತನನ್ನು ಕಿಮ್ಸ್ಗೆ ರವಾನೆ ಮಾಡಲಾಗಿದೆ. ಇನ್ನೂ ಇಬ್ಬರಿಗೂ ಸಹ ಯಾವುದೇ ತೊಂದರೆ ಹಾಗೂ ಜೀವ ಹಾನಿಯಾಗಿಲ್ಲ. 

ಈ ಕುರಿತು ಶಾಸಕ ಪ್ರಸಾದ್ ಅಬ್ಬಯ್ಯ ಅವರು ಪ್ರತಿಕ್ರಿಯಿಸಿ, ಅಭಿಮಾನಿಗಳು ಯಾವುದೇ ಕಾರಣಕ್ಕೂ ಇಂತಹ ಆತ್ಮಹಾನಿ ಕ್ರಮಗಳಿಗೆ ಮುಂದಾಗಬಾರದು ಎಂದು ಮನವಿ ಮಾಡಿದ್ದಾರೆ. ತಮ್ಮ ಬೆಂಬಲವನ್ನು ಶಾಂತಿಯುತ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ವ್ಯಕ್ತಪಡಿಸುವಂತೆ ಅವರು ಕರೆ ನೀಡಿದ್ದಾರೆ.


ಇನ್ನೂ ಇವರನ್ನು ತಕ್ಷಣವೇ ಕಿಮ್ಸ್ ಗೆ ರವಾನಿಸಿದ ಕಾಂಗ್ರೆಸ್ ಮುಖಂಡ ಕಾಶೀಂ ಕೂಡಲಗಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.