ಅರಳಕಟ್ಟಿ ಗ್ರಾಮದಲ್ಲಿ ವಿಶೇಷ ಮೊಹರಂ ಆಚರಣೆಗೆ ಸಿದ್ಧತೆ" ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವತಿಯಿಂದ ಪೂರ್ವ ಭಾವಿ ಸಭೆ''

ಅರಳಕಟ್ಟಿ ಗ್ರಾಮದಲ್ಲಿ ವಿಶೇಷ ಮೊಹರಂ ಆಚರಣೆಗೆ ಸಿದ್ಧತೆ" ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವತಿಯಿಂದ ಪೂರ್ವ ಭಾವಿ ಸಭೆ''

ಹುಬ್ಬಳ್ಳಿ ತಾಲೂಕಿನ ಅರಳಕಟ್ಟಿ ಗ್ರಾಮದಲ್ಲಿ ವಿಶೇಷ ಮೊಹರಂ ಆಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು ಇಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವತಿಯಿಂದ ಪೂರ್ವಭಾವಿ ಸಭೆಯನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಇನ್ನೂ ಈ ಗ್ರಾಮದಲ್ಲಿ 2020ರಿಂದ 2023ರವರೆಗೆ ವಿವಿಧ ಕಾರಣಗಳಿಂದ ಮೊಹರಂ ಆಚರಣೆ ನಡೆದಿರುವುದಿಲ್ಲ. ಇನ್ನೂ 2024 ರಂದು  ಹಿರಿಯ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮುರುಗೇಶ್ ಚೆನ್ನಣ್ಣವರ ಹಾಗೂ ತಹಶೀಲ್ದಾರ್ ಪ್ರಕಾಶ್ ನಾಸಿ ಅವರ ನೇತೃತ್ವದಲ್ಲಿ ಹಿಂದಿನ ಗ್ರಾಮದ ಮುಖಂಡರ ನಡುವೆ ಇದ್ದು  ಪ್ರಕರಣಗಳನ್ನು ಹಿಂಪಡೆದು, 2024ರಿಂದ ವಿಶೇಷವಾಗಿ ಮೊಹರಂ ಆಚರಣೆಗೆ ಅವಕಾಶ ಕಲ್ಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವತಿಯಿಂದ ಪೂರ್ವ ಭಾವಿ ಸಭೆ ಆಯೋಜಿಸಲಾಯಿತು. ಸಭೆಯಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (ಎಸ್‌ಪಿ) Gunjan Arya ಭಾಗವಹಿಸಿ, ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಸಭೆಯಲ್ಲಿ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿ, ಹಬ್ಬದ ಸಂದರ್ಭದಲ್ಲಿ ಪರಸ್ಪರ ಸಹಕಾರದೊಂದಿಗೆ ಶಾಂತಿ ಕಾಪಾಡುವ ಬಗ್ಗೆ ಚರ್ಚಿಸಿದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೊಲೀಸ್ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದೆ.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮುಕ್ತದಾರ, ಇನ್ಸ್‌ಪೆಕ್ಟರ್ ಮುರುಗೇಶ್ ಚೆನ್ನಣ್ಣವರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.