ಹುಬ್ಬಳ್ಳಿ: ಕೊಪ್ಪಿಕರ್ ರಸ್ತೆಯಲಿರುವ ಯುರೇಕಾ ಟವರ್ ಕಾಂಪ್ಲೆಕ್ಸ್ ಮುಂದೆ ಮತ್ತೆ ಫುಟ್ಪಾತ್ ಅತಿಕ್ರಮಣ, ಸಾರ್ವಜನಿಕರ ಆಕ್ರೋಶ
ಹುಬ್ಬಳ್ಳಿ: ಕೊಪ್ಪಿಕರ್ ರಸ್ತೆಯಲ್ಲಿ ಮತ್ತೆ ಫುಟ್ಪಾತ್ ಅತಿಕ್ರಮಣ, ಸಾರ್ವಜನಿಕರ ಆಕ್ರೋಶ
ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ಯುರೇಕಾ ಟವರ್ ಮುಂಭಾಗದಲ್ಲಿ ಮತ್ತೆ ಫುಟ್ಪಾತ್ ಮೇಲೆ ಬಟ್ಟೆಗಳನ್ನು ಹಚ್ಚಿ ವ್ಯಾಪಾರ ನಡೆಸಲಾಗುತ್ತಿದೆ. ಇದರಿಂದ ಪಾದಚಾರಿಗಳಿಗೆ ಓಡಾಡಲು ತೀವ್ರ ತೊಂದರೆ ಉಂಟಾಗಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಫುಟ್ಪಾತ್ ಅತಿಕ್ರಮಿಸಿ ಅಂಗಡಿಗಳನ್ನು ಹಾಕಿದ್ದ ವ್ಯಾಪಾರಸ್ಥರ ವಿರುದ್ಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡು ತೆರವು ಕಾರ್ಯಾಚರಣೆ ನಡೆಸಿದ್ದರು. ಆದರೂ ಮತ್ತೆ ಅದೇ ಸ್ಥಳದಲ್ಲಿ ಫುಟ್ಪಾತ್ ಮೇಲೆ ವ್ಯಾಪಾರ ಆರಂಭಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಫುಟ್ಪಾತ್ಗಳು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಲಾಗಿದ್ದು, ಅವುಗಳನ್ನು ವ್ಯಾಪಾರಕ್ಕಾಗಿ ಬಳಸುವುದರಿಂದ ಜನರು ರಸ್ತೆ ಮೇಲೆ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
ತಕ್ಷಣ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಫುಟ್ಪಾತ್ ಅತಿಕ್ರಮಣ ತೆರವುಗೊಳಿಸಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
yallu