ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸದ್ಭಾವನಾ ಪ್ರಶಸ್ತಿಗೆ ಡಾ. ರಮೇಶ್ ಮಹಾದೇವಪ್ಪನವರು ಭಾಜನ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸದ್ಭಾವನಾ ಪ್ರಶಸ್ತಿಗೆ ಡಾ. ರಮೇಶ್ ಮಹಾದೇವಪ್ಪನವರು ಭಾಜನ

ಧಾರವಾಡ: ದ.ರಾ. ಬೇಂದ್ರೆ ಸಭಾಭವನದಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿಯ ಅಂಗವಾಗಿ ಶ್ರೀ ಲಕ್ಕಮ್ಮ ದೇವಿ ಕಲಾಪೋಷಕ ಸಂಘದ ಸಹಯೋಗದಲ್ಲಿ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಮಾಲಿಕೆ – ಅಂತರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ” ನಡೆಯಿತು.

ಕಾರ್ಯಕ್ರಮದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಯನ್ನು ಗುರುತಿಸಿ ಡಾ. ರಮೇಶ್ ಮಹಾದೇವಪ್ಪನವರಿಗೆ “ಸಂಗೊಳ್ಳಿ ರಾಯಣ್ಣ ಸದ್ಭಾವನಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ರಮೇಶ್ ಮಹಾದೇವಪ್ಪನವರು, “ನಾಡಿನ ಸ್ವಾತಂತ್ರ್ಯ ಹೋರಾಟದ ವೀರಪುತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಆದರ್ಶ, ಶೌರ್ಯ ಹಾಗೂ ದೇಶಭಕ್ತಿಯ ಸ್ಮರಣಾರ್ಥವಾಗಿ ದೊರೆತ ಈ ಗೌರವವು ನನ್ನ ಸಾಮಾಜಿಕ ಬದುಕಿಗೆ ಮತ್ತಷ್ಟು ಪ್ರೇರಣೆ ಹಾಗೂ ಜವಾಬ್ದಾರಿಯನ್ನು ನೀಡಿದೆ” ಎಂದರು.

ಕಾರ್ಯಕ್ರಮದಲ್ಲಿ ಡಾ. ಸರಸ್ವತಿ ಕಳಸದ, ಡಾ. ಜೆ.ಎಂ. ಬದಾಮಿ, ಡಾ. ಸಿದ್ದರಾಮ ನಿಲಜಗಿ, ಮಹಾಂತೇಶ ಹಟ್ಟಿ, ಡಾ. ಸಿದ್ದಣ್ಣ ಬಾಡಗಿ, ಮೃತ್ಯುಂಜಯ ವಸ್ತ್ರದ, ಸುರೇಶ್ ಸಕ್ರೆನ್ನವರ್ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಆಗಮಿಸಿದ್ದ ಗಣ್ಯರು ಮತ್ತು ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.