ಮದುವೆ ಮಾಡದಿದ್ದಕ್ಕೆ ಸಾವಿನ ದಾರಿ ತುಳಿದ ಯುವಕ!

ಮದುವೆ ಮಾಡದಿದ್ದಕ್ಕೆ ಸಾವಿನ ದಾರಿ ತುಳಿದ ಯುವಕ!

ಹುಬ್ಬಳ್ಳಿ:- ಮನೆಯಲ್ಲಿ ಮದುವೆ ಮಾಡಿಸಲಿಲ್ಲವೆಂದು ಜಗಳ ಮಾಡಿ ಮನನೊಂದ ಯುವಕನೊಬ್ಬ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಸಾಯಿನಗರ ರೈಲ್ವೆ ಹಳಿ ಬಳಿ ತಡರಾತ್ರಿ ನಡೆದಿದೆ.

ಉಣಕಲ್ ದ ಸಾಯಿನಗರ ನಿವಾಸಿ ಮಲ್ಲಿಕಾರ್ಜುನ ಆತ್ಮಹತ್ಯೆ ಮಾಡಿಕೊಂಡು ಯುವಕ. ಮನೆಯಲ್ಲಿ ಮದುವೆ ಮಾಡಿಸಿ ಎಂದು ಬಹಳ ವರ್ಷಗಳಿಂದ ಒತ್ತಾಯ ಮಾಡ್ತಿದ್ದನಂತೆ, ಮದುವೆ ವಿಚಾರಕ್ಕೆ ಮನೆಯಲ್ಲಿ ಜಗಳ ಮಾಡಿ ನಿನ್ನೆ ರಾತ್ರಿ ಮನೆ ಬಿಟ್ಟು ಹೋಗಿ, ಬಳಿಕ ಸಾಯಿನಗರದ ರೈಲ್ವೆ ಹಳಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಕುಟುಂಬಸ್ಥರು ಇಂತಹ ಘಟನೆ ಆಗದಂತೆ ನೋಡಿಕೊಳ್ಳಬೇಕು .