ನವನಗರ ಪೊಲೀಸ್ ಠಾಣೆ ಸಿಬ್ಬಂದಿಗಳ ಯಶಸ್ವಿ ಕಾರ್ಯಚರಣೆ " ಸಾರ್ವಜನಿಕರು ಮೆಚ್ಚುಗೆ ಮಹಾಪೂರ

ನವನಗರ ಪೊಲೀಸ್ ಠಾಣೆ ಸಿಬ್ಬಂದಿಗಳ ಯಶಸ್ವಿ ಕಾರ್ಯಚರಣೆ " ಸಾರ್ವಜನಿಕರು ಮೆಚ್ಚುಗೆ ಮಹಾಪೂರ

ಹುಬ್ಬಳ್ಳಿ:- ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚಿ ಮರಳಿ ವಾರಸುದಾರರಿಗೆ ನೀಡುವ ಮೂಲಕ ಹುಬ್ಬಳ್ಳಿಯ APMC ನವನಗರ ಪೊಲೀಸ್ ಠಾಣೆ ಮತ್ತೊಮ್ಮೆ ಜನಮೆಚ್ಚುಗೆಗೆ ಪಾತ್ರವಾಗಿದೆ. CEIR ಪೋರ್ಟಲ್‌ನ ಸಹಾಯದಿಂದ ಒಟ್ಟು 7 ಮೊಬೈಲ್‌ಗಳನ್ನು ಮರುಪಡೆದು, ಅವುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

ಹುಬ್ಬಳ್ಳಿಯ APMC ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 7 ಮೊಬೈಲ್‌ಗಳನ್ನು CEIR ಪೋರ್ಟಲ್ ಮೂಲಕ ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ.

ಪೊಲೀಸ್ ಇನ್ಸ್‌ಪೆಕ್ಟರ್ ಜಯಂತ ಗೌಳಿ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಮೊಬೈಲ್‌ಗಳನ್ನು ಮರುಪಡೆದು ಅವುಗಳ ವಾರಸುದಾರರಿಗೆ ಹಸ್ತಾಂತರ ಮಾಡಿತು.

ಈ ಕಾರ್ಯಾಚರಣೆಯಲ್ಲಿ PSI ಉಮೇಶಗೌಡ ಪಾಟೀಲ ಹಾಗೂ ಸಿಬ್ಬಂದಿಗಳಾದ ಮುತ್ತು ಸಿ.ಎಸ್., ವಿಜಯಲಕ್ಷ್ಮೀ ಅಂಗಡಿ ಮತ್ತು ಅಜಯ್ ತಲವಾರ ಪ್ರಮುಖ ಪಾತ್ರವಹಿಸಿದ್ದರು.
ಕಳೆದುಹೋದ ಮೊಬೈಲ್‌ಗಳನ್ನು ಮರಳಿ ಪಡೆದ ಸಾರ್ವಜನಿಕರು ಪೊಲೀಸ್ ಇಲಾಖೆಯ ಕಾರ್ಯವನ್ನು ಮೆಚ್ಚಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸಾರ್ವಜನಿಕರ ಆಸ್ತಿ ರಕ್ಷಣೆಗೆ ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವ ಇಂತಹ ಕಾರ್ಯಗಳು ಜನರಲ್ಲಿ ಮತ್ತಷ್ಟು ವಿಶ್ವಾಸ ಮೂಡಿಸುತ್ತಿದ್ದು, APMC ನವನಗರ ಪೊಲೀಸ್ ಠಾಣೆಯ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.