ಗುರುಗಳಿಗೆ ಗೌರವದ ನಮನ: ಶಿಕ್ಷಕರ ದಿನಾಚರಣೆಯಲ್ಲಿ ಡಾ. ರಮೇಶ ಮಹಾದೇವಪ್ಪನವರ ಸನ್ಮಾನ ಸ್ವೀಕಾರ
ಹುಬ್ಬಳ್ಳಿ: ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯ ಅಂಗವಾಗಿ ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಎಸ್.ಎಸ್.ಕೆ. ಕಲ್ಯಾಣ ಮಂಟಪದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸರ್ವಧರ್ಮ ಸಮಾಜ ಸೇವಕರಾದ ಡಾ. ರಮೇಶ ಮಹಾದೇವಪ್ಪನವರು ಭಾಗವಹಿಸಿ ಆತ್ಮೀಯ ಸನ್ಮಾನ ಸ್ವೀಕರಿಸಿದರು.
ತಾಲೂಕು ಮಟ್ಟದಲ್ಲಿ ಶೈಕ್ಷಣಿಕ ಕ್ಷೇತ್ರ ಹಾಗೂ ಸಮಾಜಮುಖಿ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿದ ಹಲವು ಪ್ರಮುಖ ಶಿಕ್ಷಕರು ಹಾಗೂ ಗಣ್ಯರನ್ನು ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಜನಪ್ರಿಯ ಶಾಸಕರಾದ ಶ್ರೀ ಮಹೇಶ್ ಟೆಂಗಿನಕಾಯಿ ವಹಿಸಿದ್ದರು..
ಈ ಸಂದರ್ಭದಲ್ಲಿ ತಾಲೂಕು ಶಿಕ್ಷಣಾಧಿಕಾರಿ ಶ್ರೀ ಉಮೇಶ ಬೊಮ್ಮಕ್ಕನವರ, ಶ್ರೀ ಗಂಗಾಧರ ಕುಂದರೂರ, ಶ್ರೀ ವಿ.ಎಫ್. ಚುಳಕಿ, ಶ್ರೀ ಎಸ್.ಎಸ್. ಕೆಳದಿ, ಶ್ರೀ ಬಸವರಾಜ ಹೊಸಮನಿ, ಶ್ರೀ ಅಶೋಕಕುಮಾರ ಸಿಂದಗಿ, ಶ್ರೀ ಸಂತೋಷಿ ದಂಡಗಲ, ಶ್ರೀ ರಾಮಚಂದ್ರ ಗುಳೇದ, ಶ್ರೀ ಜಿ.ಎಸ್. ಹುಬ್ಬಳ್ಳಿ, ಶ್ರೀ ಎಂ.ಎಸ್. ಶಿವಳ್ಳಿಮಠ ಸೇರಿದಂತೆ ಹಲವು ಗಣ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
yallu