ಹುಬ್ಬಳ್ಳಿ:- ಡಾ.ರಮೇಶ್ ಮಹಾದೇವಪ್ಪನವರ ಗೆ "ದಿ ಸ್ಟಾರ್ ಆಫ್ ಕರ್ನಾಟಕ” ಪ್ರಶಸ್ತಿ ಪ್ರದಾನ
ಡಾ.ರಮೇಶ್ ಗೆ "ದಿ ಸ್ಟಾರ್ ಆಫ್ ಕರ್ನಾಟಕ” ಪ್ರಶಸ್ತಿ ಪ್ರದಾನ
ಹುಬ್ಬಳ್ಳಿ: ಶ್ರೇಯ ಜನ ಸೇವಾ ಟ್ರಸ್ಟ್ ಕಮಿಟಿ, ಹುಬ್ಬಳ್ಳಿ ಹಾಗೂ ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನ, ವಿದ್ಯಾನಗರ ಇವರ ಸಹಯೋಗದಲ್ಲಿ ಗ್ಲೋಬಲ್ ಕಾಲೇಜಿನಲ್ಲಿ ನೂತನ ಟ್ರಸ್ಟ್ ಉದ್ಘಾಟನೆ, 80ನೇ ಭಾರತ ಸ್ವಾತಂತ್ರ್ಯೋತ್ಸವ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ “ಪ್ರಶಸ್ತಿ ಪ್ರದಾನ 2026” ಹಾಗೂ ಶ್ರೀ ವಿ.ಜಿ. ಪಾಟೀಲ್ ಅವರ 63ನೇ ಜನ್ಮದಿನೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಡಾ. ರಮೇಶ್ ಮಹಾದೇವಪ್ಪನವರ ಅವರಿಗೆ “ದಿ ಸ್ಟಾರ್ ಆಫ್ ಕರ್ನಾಟಕ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶಾಂತಣ್ಣ ಕಡಿವಾಳ ವಹಿಸಿದ್ದರು. ಅತಿಥಿಗಳಾಗಿ ಶ್ರೀ ರಾಜೇಂದ್ರ ಶೆಟ್ಟಿ, ಡಾ. ವಿನೋದ್ ಮುಕ್ತೈದಾರ್, ಡಾ. ಶರಣಪ್ಪ ಕೊಟ್ಟಗಿ, ಬಾಪುಗೌಡ ಪಾಟೀಲ್, ಡಾ. ಪುಷ್ಪ ಹಿರೇಮಠ, ಡಾ. ಮಹೇಶ್ ದೇಶಪಾಂಡೆ, ವಿ.ಎಂ. ಹಿರೇಮಠ, ಶ್ರೀ ಗದಿಗೆಯ್ಯ ಹಿರೇಮಠ ಹಾಗೂ ಶ್ರೀಮತಿ ಪದ್ಮ ಉಮರ್ಜಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಆಯೋಜಕರಾದ ಶ್ರೀ ವಿ.ಜಿ. ಪಾಟೀಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರು, ಸಾಧಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
yallu