ಧಾರವಾಡದಲ್ಲಿ ವನಮಹೋತ್ಸವ: ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದ "ಜಿಲ್ಲಾಧ್ಯಕ್ಷೆ" ಗೌರಮ್ಮಾ ಬಲೋಗಿ

ಧಾರವಾಡದಲ್ಲಿ ವನಮಹೋತ್ಸವ: ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದ "ಜಿಲ್ಲಾಧ್ಯಕ್ಷೆ" ಗೌರಮ್ಮಾ ಬಲೋಗಿ

ಧಾರವಾಡದಲ್ಲಿ ವನಮಹೋತ್ಸವ: ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದ ಗೌರಮ್ಮಾ ಬಲೋಗಿ

ಧಾರವಾಡ: "ಅಕ್ಷರ, ಅನ್ನ, ಪರಿಸರ ಚಿನ್ನ" ಎಂಬ ಸಂದೇಶದೊಂದಿಗೆ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ, ಅಕ್ಷರ ಕಲಿತರೆ ಅನ್ನ ಸಿಗುತ್ತದೆ, ಪರಿಸರವನ್ನು ಬೆಳೆಸಿದರೆ ಚಿನ್ನದಷ್ಟು ಅಮೂಲ್ಯವಾದ ಉಸಿರು ಸಿಗುತ್ತದೆ ಎಂದು ಹೇಳಿದರು.

ಧಾರವಾಡದ ಆದಿ ಶಕ್ತಿ ಕಾಲೋನಿಯಲ್ಲಿ ಗೌರಮ್ಮಾ ಬಲೋಗಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

ಮರಗಳು ಪ್ರಕೃತಿಯ ಅಮೂಲ್ಯ ಸಂಪತ್ತಾಗಿದ್ದು, ಅವುಗಳ ಸಂರಕ್ಷಣೆಯಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ಹಸಿರು ಪರಿಸರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಅದರ ಆರೈಕೆ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಸಸಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇದೇ ವೇಳೆ, ಗೌರಮ್ಮಾ ಬಲೋಗಿ ಅವರು ನಿರಂತರವಾಗಿ ಸಮಾಜಮುಖಿ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸುಶೀಲಾ ಹಿರೇಮಠ, ಸವಿತಾ ನಾಡಕಟ್ಟಿ, ಶಶಿಕಲಾ ಚಂದ್ರಗಿ, ಸರೋಜಾ ಪೂಜಾರ, ಗೌರಮ್ಮಾ ಅಗಡಿ, ಶೋಭಾ ಕರಸುಬ್ಬನವರ, ಸುರೇಖಾ, ವಿಜಯಲಕ್ಷ್ಮಿ ಮಲ್ಲಗವಾಡ, ಮಾದೇವಿ ಬ್ಯಾಳಿ, ವಿದ್ಯಾ ವಾಲಿ, ಸುಮಾ ಜೀವಾಪುರ, ಉಮೇಶ್ ಕುರಹಟ್ಟಿ ದೇಸಾಯಿ, ಪರಪ್ಪ ಆಯಟಿ, ಪಿ.ವಿ. ಪಾಟೀಲ್, ಕಾಡದೇವರಮಠ, ಎನ್. ಬಲಾರ್ ,ಬಟ್ಟೂರ್, ಅಶ್ವಿನಿ ಮನ್ನೂರ,ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸ್ಥಳೀಯ ಮುಖಂಡರು, ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.