ಸೇವಾ ನಿವೃತ್ತ ಹಿರಿಯ ಮುಖ್ಯ ಶಿಕ್ಷಕ ಎಂ.ಎಚ್. ಬಣವಿ ಅವರಿಗೆ ಭಾವಪೂರ್ಣ ಸನ್ಮಾನ: ಡಾ.ರಮೇಶ್ ಭಾಗಿ ಶುಭಾಶಯ

ಸೇವಾ ನಿವೃತ್ತ ಹಿರಿಯ ಮುಖ್ಯ ಶಿಕ್ಷಕ ಎಂ.ಎಚ್. ಬಣವಿ ಅವರಿಗೆ ಭಾವಪೂರ್ಣ ಸನ್ಮಾನ: ಡಾ.ರಮೇಶ್ ಭಾಗಿ ಶುಭಾಶಯ

ಹುಬ್ಬಳ್ಳಿ: ಕರ್ನಾಟಕ ಪಬ್ಲಿಕ್ ಸ್ಕೂಲ್, ಗೋಪನಕೊಪ್ಪದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಹಿರಿಯ ಮುಖ್ಯ ಶಿಕ್ಷಕರಾದ ಶ್ರೀ ಎಂ.ಎಚ್. ಬಣವಿ ಅವರ ಸೇವಾ ಸಂಪನ್ನ ಸಮಾರಂಭವು ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಸರ್ವಧರ್ಮ ಸಮಾಜ ಸೇವಕರಾದ ಡಾ. ರಮೇಶ್ ಮಹಾದೇವಪ್ಪನವರ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಬಳಿಕ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಶ್ರೀ ಬಣವಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ, ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು ಹಾಗೂ ಅತಿಥಿ ಸತ್ಕಾರವನ್ನು ಸ್ವೀಕರಿಸಿದರು.


ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮಿಗಳು (ಸಂಸ್ಥಾನ ಮಠ, ಶಿರಹಟ್ಟಿ) ಹಾಗೂ ಶ್ರೀ ಬಸವಲಿಂಗ ಮಹಾಸ್ವಾಮಿಗಳು (ರುದ್ರಾಕ್ಷಿ ಮಠ, ಹುಬ್ಬಳ್ಳಿ) ವಹಿಸಿದ್ದರು.

ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಎಂ.ವೈ. ನರಗುಂದ, ಶ್ರೀ ಬೀರಪ್ಪ ಕಂಡೇಕರ್, ಶ್ರೀ ಗುರಿಕಾರ್ ಸೇರಿದಂತೆ ಹಳೆ ವಿದ್ಯಾರ್ಥಿಗಳ ಬಳಗ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಹುಬ್ಬಳ್ಳಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘ, ಶ್ರೀ ಬಣವಿ ಅವರ ಅಭಿಮಾನಿ ಬಳಗ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.