ಗೋಕುಲ ರಸ್ತೆಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ " ಸೀಜ್ ಮಾಡುವಂತೆ ಕಮೀಷನರ್ ಸೂಚನೆ?
ಮಹಾನಗರ ಪಾಲಿಕೆ ಅನುಮತಿ ಇಲ್ಲದೆ ಶೆಡ್ ನಿರ್ಮಾಣ: ಶೆಡ್ ಸೀಜ್ ಮಾಡುವಂತೆ ಸೂಚನೆ
ಹುಬ್ಬಳ್ಳಿ: ಗೋಕುಲ ರಸ್ತೆಯ ಕೃಷಿ ಭೂಮಿಯಲ್ಲಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೆ ಅಕ್ರಮವಾಗಿ ಬೃಹತ್ ಶೆಡ್ ನಿರ್ಮಿಸಿ ಬಾಡಿಗೆಗೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಬಂಧಿತ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶೆಡ್ ಅನ್ನು ಸೀಜ್ (ಜಪ್ತಿ) ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ರುದ್ರೇಶ್ ಘಾಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೃಷಿ ಭೂಮಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಶೆಡ್ ನಿರ್ಮಿಸಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅನುಮತಿ ಪಡೆಯದೆ ನಿರ್ಮಾಣ ಮಾಡಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅಕ್ರಮ ನಿರ್ಮಾಣ ತೆರವುಗೊಳಿಸುವ ಪ್ರಕ್ರಿಯೆ ಕೈಗೊಂಡು, ಶೆಡ್ ಅನ್ನು ಸೀಜ್ ಮಾಡುವುದರ ಜೊತೆಗೆ ಸಂಬಂಧಿತ ಮಾಲೀಕರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸುತ್ತೇವೆ.ಇನ್ನೂ ಬಾಡಿಗೆ ನೀಡಿರುವ ಮಾಲೀಕನ ಯಾವುದೇ ಪರವಾನಿಗೆ ಪಡೆದಿಲ್ಲ,ಆದ್ರೂ ಸಹ ರಾಜರೋಷವಾಗಿ ಬಾಡಿಗೆ ಹಣ ಪಡೆಯುತ್ತಿದ್ದಾನೆ.
ಇನ್ನೂ ಮಹಾನಗರ ಪಾಲಿಕೆ ಕಮೀಷನರ್ ಖಡಕ್ ಆಗಿ ಹೇಳಿದ್ರೂ ಸಹ ಬಾಡಿಗೆ ಪಡೆದ ಮಾಲೀಕರು ಅಲ್ಲಿಂದ ಕಾಲು ಕಿಳ್ಳುತ್ತಿಲ್ಲ ಯಾಕೆ? ಇನ್ನೂ ಈ ಪ್ರಕರಣದಲ್ಲಿ ರಾಜಕೀಯ ಒತ್ತಡ ಕೇಳಿ ಬರುತ್ತಿದೆ, ಇನ್ನೂ ಇಂತಹ ಅಕ್ರಮ ಕೆಲಸಕ್ಕೆ ರಾಜಕೀಯ ನಾಯಕರ ಬೆಂಬಲ ಯಾಕೆ? ಪುಟ್ ಪಾತ್ ಮೇಲೆ ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ಸಾಗಿತ್ತಿರುವ ಬಡವರ ಅಂಗಡಿ ತೆರವೂ ಮಾಡಿರುವ ಅಧಿಕಾರಿಗಳು ಇಂತಹ ದೊಡ್ಡ ಮಟ್ಟದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದ್ದಾರೆ, ಆದ್ರೂ ಯಾಕೆ ಬಡವರಿಗೊಂದು ನ್ಯಾಯ? ಶ್ರೀಮಂತರಿಗೊಂದು ನ್ಯಾಯ ನಾ? ದುಡ್ಡು ಕೊಟ್ರೇ ಇಲ್ಲಿ ಎಲ್ಲವೂ ನಡೆಯುತ್ತಾ?
ವರದಿ ರಾಜು ಮುದ್ಗಲ್ ಹುಬ್ಬಳ್ಳಿ
yallu