ಅಭಿಮಾನಿಯ "ಪ್ರೀತಿಯ ಕಾಣಿಕೆಗೆ ಭಾವುಕರಾದ ಡಾ. ರಮೇಶ್ ಹಾಗೂ ಧರ್ಮಪತ್ನಿ ಗೀತಾ ರಮೇಶ್ "

ಅಭಿಮಾನಿಯ  "ಪ್ರೀತಿಯ ಕಾಣಿಕೆಗೆ ಭಾವುಕರಾದ ಡಾ. ರಮೇಶ್ ಹಾಗೂ ಧರ್ಮಪತ್ನಿ ಗೀತಾ ರಮೇಶ್ "

ಹುಬ್ಬಳ್ಳಿ:-  ಅಭಿಮಾನಕ್ಕೆ ಹಲವಾರು ರೂಪಗಳಿರುತ್ತವೆ. ಆದರೆ ಇಲ್ಲೊಬ್ಬ ಅಭಿಮಾನಿ ತಮ್ಮ ಅಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರ ಜನ್ಮದಿನದ ಅಂಗವಾಗಿ, ಆತ್ಮೀಯ ಅಭಿಮಾನಿ ಹಾಗೂ ಸಹೋದರ  ಸಾಯಿಲ್ ಠಾಕೂರ್ ಅವರು ತಮ್ಮ ರಕ್ತದಿಂದ ಡಾ. ರಮೇಶ್ ಹಾಗೂ ಅವರ ಧರ್ಮಪತ್ನಿ ಗೀತಾ ರಮೇಶ್ ಅವರ ಭಾವಚಿತ್ರವನ್ನು ರಚಿಸಿ ಉಡುಗೊರೆಯಾಗಿ ನೀಡಿದ್ದಾರೆ. ಈ ಅಪರೂಪದ ಕಾಣಿಕೆ ಭಾವನಾತ್ಮಕ್ಕೆ ಸಾಕ್ಷಿಯಾಗಿದೆ...

ಸಮಾಜಸೇವೆಯ ಮೂಲಕ ಜನಮನ ಗೆದ್ದಿರುವ ಡಾ. ರಮೇಶ್ ಮಹಾದೇವಪ್ಪನವರ ಅವರ ಜನ್ಮದಿನ ಈ ಬಾರಿ ವಿಶೇಷವಾಗಿತ್ತು.
ಅವರ ಮೇಲಿನ ಅಪಾರ ಅಭಿಮಾನ ಮತ್ತು ಆತ್ಮೀಯತೆಯ ಸಂಕೇತವಾಗಿ  ಸಾಯಿಲ್ ಠಾಕೂರ್ ಅವರು ತಮ್ಮದೇ ರಕ್ತದಿಂದ ಡಾ. ರಮೇಶ್ ಅವರ ಭಾವಚಿತ್ರವನ್ನು ರಚಿಸಿ ಉಡುಗೊರೆಯಾಗಿ ನೀಡಿದರು.

ಈ ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ ಡಾ. ರಮೇಶ್ ಮಹಾದೇವಪ್ಪನವರ ಅವರು ಭಾವುಕರಾಗಿ ಪ್ರತಿಕ್ರಿಯಿಸಿ, "ಇದು ಕೇವಲ ಒಂದು ಭಾವಚಿತ್ರವಲ್ಲ. ಇದು ನನ್ನ ಮೇಲಿರುವ ನಿಸ್ವಾರ್ಥ ಪ್ರೀತಿ, ಅಭಿಮಾನ, ವಿಶ್ವಾಸ ಹಾಗೂ ನಮ್ಮ ಆತ್ಮೀಯ ಬಾಂಧವ್ಯದ ಪ್ರತೀಕವಾಗಿದೆ. ಇಂತಹ ಪ್ರೀತಿಯ ಮುಂದೆ ನಾನು ಸದಾ ಚಿರಋಣಿಯಾಗಿದ್ದೇನೆ" ಎಂದು ಹೇಳಿದ್ದಾರೆ.

 ಅಭಿಮಾನಿಯ ಅಪಾರ ಪ್ರೀತಿ ಮತ್ತು ಅಭಿಮಾನಕ್ಕೆ ಸಾಕ್ಷಿಯಾದ ಈ ಅಪರೂಪದ ಉಡುಗೊರೆ, ಅಲ್ಲಿದ್ದ ಪ್ರತಿಯೊಬ್ಬರ ಮನಸ್ಸನ್ನೂ ಸ್ಪರ್ಶಿಸಿತು. ಇಂತಹ ಆತ್ಮೀಯ ಸಂಬಂಧಗಳೇ ಜೀವನದ ನಿಜವಾದ ಸಂಪತ್ತು ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ಸಾರಿದ್ದು ವಿಶೇಷವಾಗಿದೆ....