ಹುಬ್ಬಳ್ಳಿ: ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರಿಗೆ 6,000 ರೂ ದಂಡ

ಹುಬ್ಬಳ್ಳಿ: ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರಿಗೆ 6,000 ರೂ ದಂಡ

ಹುಬ್ಬಳ್ಳಿ: ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರಿಗೆ ₹6,000 ದಂಡ
 ಆಯುಕ್ತರು, ಕಾರ್ಯನಿರ್ವಾಹಕ ಅಭಿಯಂತರರು (ಘನ ತ್ಯಾಜ್ಯ ನಿರ್ವಹಣೆ) ಹಾಗೂ ವಲಯ ಆಯುಕ್ತರ ನಿರ್ದೇಶನದಂತೆ ವಲಯ ಕಚೇರಿ-01 ವತಿಯಿಂದ ಸ್ವಚ್ಛತಾ ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.


ವಲಯ ಕಚೇರಿ-01ರ ಹಿರಿಯ ಆರೋಗ್ಯ ನಿರೀಕ್ಷಕರಾದ ಜ್ಯೋತಿ ಚುಲಕಿಮಠ ಹಾಗೂ ಶಾಂತಗೌಡ ಬಿರಾದಾರ, ಕಿರಿಯ ಆರೋಗ್ಯ ನಿರೀಕ್ಷಕರಾದ ಸುಮಾ ಕೋಟಿ ಅವರ ನೇತೃತ್ವದಲ್ಲಿ ವಾರ್ಡ್ ನಂ.11 ಮತ್ತು 12ರ ಕುಸುಮನಗರ ಹಾಗೂ ಕೆಲಗೇರಿ ಮುಖ್ಯರಸ್ತೆ ಪಕ್ಕದಲ್ಲಿ ಅಕ್ರಮವಾಗಿ ತ್ಯಾಜ್ಯ ಎಸೆಯುತ್ತಿದ್ದ ಸಾರ್ವಜನಿಕರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಯಿತು.


ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದ ಸಾರ್ವಜನಿಕರಿಗೆ ಒಟ್ಟು ₹6,000 ದಂಡ ವಿಧಿಸಲಾಯಿತು. ಅಲ್ಲದೇ, ಮುಂದೆಯೂ ಇದೇ ರೀತಿಯ ತಪ್ಪು ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.


ಈ ಸಂದರ್ಭದಲ್ಲಿ ಸಂಚಾಲಕರು, ಜಮಾದಾರರಾದ ವಿಕ್ರಮ್ ಸಣ್ಣಮನಿ, ಪವನ ಸಗಬಾಳ, ಶ್ರೀನಿವಾಸ ಕೋಟಂಕ ಹಾಗೂ ವಾಹನ ಚಾಲಕರು ಉಪಸ್ಥಿತರಿದ್ದರು.