ಬೇಡಿದ ವರ ನೀಡುವ ಶ್ರೀ ಸಿದ್ದಪ್ಪಜ್ಜನ ದರ್ಶನ ಪಡೆದ ಡಾ.ರಮೇಶ್ ಮಹಾದೇವಪ್ಪನವರ

ಬೇಡಿದ ವರ ನೀಡುವ ಶ್ರೀ ಸಿದ್ದಪ್ಪಜ್ಜನ ದರ್ಶನ ಪಡೆದ ಡಾ.ರಮೇಶ್ ಮಹಾದೇವಪ್ಪನವರ

ಹುಬ್ಬಳ್ಳಿ:-  ಉಣಕಲ್‌ನ ಪ್ರಸಿದ್ಧ ಶ್ರೀ ಸಿದ್ದಪ್ಪಜ್ಜನ ದರ್ಶನ ಪಡೆದ ಸರ್ವಧರ್ಮದ ಸಮಾಜಸೇವಕರಾದ ಡಾ. ರಮೇಶ್ ಮಹಾದೇವಪ್ಪ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್), ಹುಬ್ಬಳ್ಳಿ ಗ್ರಾಮೀಣ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಧಾರವಾಡ ಜಿಲ್ಲೆ ಇವರ ವತಿಯಿಂದ ಆಯೋಜಿಸಲಾದ ನವ ಜೀವನೋತ್ಸವ ಹಾಗೂ ದುಶ್ಚಟಗಳ ವಿರುದ್ಧ ಮಾಹಿತಿ ಜಾಗೃತಿ ಕಾರ್ಯಕ್ರಮ"ದಲ್ಲಿ ಭಾಗವಹಿಸಿದ ಸರ್ವಧರ್ಮದ ಸಮಾಜಸೇವಕರಾದ ಡಾ. ರಮೇಶ್ ಮಹಾದೇವಪ್ಪ ಅವರು ಉಣಕಲ್‌ನ ಪ್ರಸಿದ್ಧ ಶ್ರೀ ಸಿದ್ದಪ್ಪಜ್ಜನವರ ದರ್ಶನ ಪಡೆದು ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಸಿದ್ದಪ್ಪಜ್ಜನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಮಾಜದಲ್ಲಿ ಸದಾಚಾರ, ಉತ್ತಮ ಬದುಕಿನ ಸಂಕಲ್ಪ ಹಾಗೂ ದುಶ್ಚಟಗಳಿಂದ ಮುಕ್ತವಾದ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿದರು.


"ಪೂಜ್ಯರ ಆಶೀರ್ವಾದ ನನ್ನ ಬದುಕಿನ ಅಮೂಲ್ಯ ಕ್ಷಣ. ಇಂತಹ ಜಾಗೃತಿ ಕಾರ್ಯಕ್ರಮಗಳು ಸಮಾಜದಲ್ಲಿ ಉತ್ತಮ ಸಂಸ್ಕಾರ, ಸೇವಾ ಮನೋಭಾವ ಮತ್ತು ಸೌಹಾರ್ದತೆಯನ್ನು ಬೆಳೆಸಲಿ" ಎಂದು ಡಾ. ರಮೇಶ್ ಮಹಾದೇವಪ್ಪ ಅಭಿಪ್ರಾಯಪಟ್ಟರು.