MMK ಬಿಲ್ಡರ್ಸ್ & ಡೆವಲಪರ್ಸ್ ನೂತನ ಕಚೇರಿ ಉದ್ಘಾಟನೆಗೆ ಡಾ. ರಮೇಶ್ ಮಹಾದೇವಪ್ಪನವರ ಶುಭಾಶಯ
ಹುಬ್ಬಳ್ಳಿ: ನಗರದ ಪ್ರಮುಖ ಉದ್ಯಮಿ ಹಾಗೂ ಸಮಾಜ ಸೇವಕರಾದ ಮುಖಂಡ ಬಬ್ಲು ಕಾತರಕಿ ಅವರ ಎಂಎಂಕೆ ಬಿಲ್ಡರ್ಸ್ & ಡೆವಲಪರ್ಸ್ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಸರ್ವಧರ್ಮ ಸಮಾಜ ಸೇವಕರಾದ ಡಾ. ರಮೇಶ್ ಮಹಾದೇವಪ್ಪನವರು ವಿಶೇಷ ಅತಿಥಿಯಾಗಿ ಭಾಗವಹಿಸಿ, ನೂತನ ಕಚೇರಿಗೆ ಶುಭ ಹಾರೈಸಿದರು. ಇದೇ ವೇಳೆ ಸಂಸ್ಥೆಯ ವತಿಯಿಂದ ನಡೆದ ಆತ್ಮೀಯ ಸತ್ಕಾರವನ್ನು ಅವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಮೇಶ್ ಮಹಾದೇವಪ್ಪನವರ, "ಎಂಎಂಕೆ ಬಿಲ್ಡರ್ಸ್ & ಡೆವಲಪರ್ಸ್ ಸಂಸ್ಥೆಯು ಇನ್ನಷ್ಟು ಅಭಿವೃದ್ಧಿ ಹೊಂದಿ, ಯಶಸ್ಸಿನ ಹೊಸ ಮೈಲಿಗಲ್ಲುಗಳನ್ನು ತಲುಪಿ, ಗುಣಮಟ್ಟದ ಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಲಿ" ಎಂದು ಹೃತ್ಪೂರ್ವಕ ಶುಭಾಶಯಗಳನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿ ಯುವ ನಾಯಕ ಮಂಜುನಾಥ ಅಬ್ಬಯ್ಯ, ಮಹಾನಗರ ಪಾಲಿಕೆಯ ವಿವಿಧ ಸದಸ್ಯರು, ಗಣ್ಯರು, ಸ್ನೇಹಿತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ನೂತನ ಕಚೇರಿ ಉದ್ಘಾಟನಾ ಸಮಾರಂಭದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು.
yallu