ಶ್ರೀ ಸಿಮೆಂಟ್ ಸ್ಟೇಟ್ ಹೆಡ್‌ಗಳಿಗೆ ಡಾ. ರಮೇಶ್ ಮಹಾದೇವಪ್ಪರಿಂದ ಆತ್ಮೀಯ ಸನ್ಮಾನ ಭೂಮಾ ಹಾಗೂ ಅರುಣ್ ಪಾಟೀಲ್‌ರ ಗೌರವಾನ್ವಿತ ಭೇಟಿ – ಶುಭ ಹಾರೈಕೆಗೆ ಕೃತಜ್ಞತೆ ವ್ಯಕ್ತಪಡಿಸಿದ ಡಾ. ರಮೇಶ್

ಶ್ರೀ ಸಿಮೆಂಟ್ ಸ್ಟೇಟ್ ಹೆಡ್‌ಗಳಿಗೆ ಡಾ. ರಮೇಶ್ ಮಹಾದೇವಪ್ಪರಿಂದ ಆತ್ಮೀಯ ಸನ್ಮಾನ ಭೂಮಾ ಹಾಗೂ ಅರುಣ್ ಪಾಟೀಲ್‌ರ ಗೌರವಾನ್ವಿತ ಭೇಟಿ – ಶುಭ ಹಾರೈಕೆಗೆ ಕೃತಜ್ಞತೆ ವ್ಯಕ್ತಪಡಿಸಿದ ಡಾ. ರಮೇಶ್

ಹುಬ್ಬಳ್ಳಿಯಲ್ಲಿರುವ ಡಾ. ರಮೇಶ್ ಮಹಾದೇವಪ್ಪ ಅವರ ಕಚೇರಿಗೆ ಶ್ರೀ ಸಿಮೆಂಟ್‌ನ ಸ್ಟೇಟ್ ಹೆಡ್‌ಗಳಾದ ಭೂಮಾ ಹಾಗೂ ಅರುಣ್ ಪಾಟೀಲ್ ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಡಾ. ರಮೇಶ್ ಮಹಾದೇವಪ್ಪ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವ ಸಲ್ಲಿಸಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ವಿವಿಧ ವಿಚಾರಗಳ ಕುರಿತು ಸ್ನೇಹಪೂರ್ವಕವಾಗಿ ಮಾತುಕತೆ ನಡೆಸಲಾಯಿತು.

ಬಳಿಕ ಮಾತನಾಡಿದ ಡಾ. ರಮೇಶ್ ಮಹಾದೇವಪ್ಪ ಅವರು, "ನಿಮ್ಮ ಶುಭ ಹಾರೈಕೆಗಳು ನಮಗೆ ಮತ್ತಷ್ಟು ಉತ್ಸಾಹ ಮತ್ತು ಜವಾಬ್ದಾರಿಯನ್ನು ನೀಡಿವೆ. ನಿಮ್ಮ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು" ಎಂದು ಹೇಳಿದರು.
ಈ ವೇಳೆ ಉಪಸ್ಥಿತರಿದ್ದ ಗಣ್ಯರು ಈ ಸೌಹಾರ್ದಯುತ ಭೇಟಿಯನ್ನು ಮೆಚ್ಚಿ, ಎಲ್ಲರಿಗೂ ಶುಭ ಹಾರೈಸಿದರು.