ಪೊಲೀಸ್ ಆಯುಕ್ತರ ಭೇಟಿಗೆ ಜನಸಾಗರ: ಅಪರಾಧ ಹಿನ್ನೆಲೆಯವರ ಫೋಟೋ ಕುರಿತು ಪೋಲಿಸ್ ಆಯುಕ್ತರ ಸ್ಪಷ್ಟನೆ

ಪೊಲೀಸ್ ಆಯುಕ್ತರ ಭೇಟಿಗೆ ಜನಸಾಗರ: ಅಪರಾಧ ಹಿನ್ನೆಲೆಯವರ ಫೋಟೋ ಕುರಿತು ಪೋಲಿಸ್ ಆಯುಕ್ತರ ಸ್ಪಷ್ಟನೆ

ಪೊಲೀಸ್ ಆಯುಕ್ತರ ಭೇಟಿಗೆ ಜನಸಾಗರ: ಅಪರಾಧ ಹಿನ್ನೆಲೆಯವರ ಫೋಟೋ ಕುರಿತು ಸ್ಪಷ್ಟನೆ

ಹುಬ್ಬಳ್ಳಿ-ಧಾರವಾಡದ ನೂತನ ಪೊಲೀಸ್ ಆಯುಕ್ತರಾಗಿ ಭೂಷಣ ಬೋರಸೆ ಅವರು ಎರಡು ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ, 200ಕ್ಕೂ ಹೆಚ್ಚು ನಾಗರಿಕರು ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಶುಭಾಶಯ ಕೋರಿದರು.

ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ, ಅಪರಾಧ ಹಿನ್ನೆಲೆ ಹೊಂದಿರುವ ಕೆಲವರು ಕೂಡ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಛಾಯಾಚಿತ್ರ ತೆಗೆಸಿಕೊಂಡಿರುವುದು ನಂತರ ಗಮನಕ್ಕೆ ಬಂದಿದೆ.

ಅಂತಹ ವ್ಯಕ್ತಿಗಳು ಭೇಟಿ ನೀಡಿರುವುದು ಅಥವಾ ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡಿರುವುದನ್ನು ಪೊಲೀಸ್ ಇಲಾಖೆಯೊಂದಿಗಿನ ಯಾವುದೇ ರೀತಿಯ ಸಂಬಂಧವೆಂದು ಅರ್ಥೈಸಬಾರದು ಎಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಅಪರಾಧ ಮತ್ತು ಅಪರಾಧಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ನಿಷ್ಪಕ್ಷಪಾತವಾಗಿ ಹಾಗೂ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಬದ್ಧರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.