ಶ್ರಾವಣ ಮಾಸದ ನಿಮಿತ್ತ ಶ್ರೀ ಮಾರುತಿ ದೇವರ ದರ್ಶನ ಪಡೆದ ಡಾ. ರಮೇಶ್ ಮಹಾದೇವಪ್ಪನವರ

ಶ್ರಾವಣ ಮಾಸದ ನಿಮಿತ್ತ ಶ್ರೀ ಮಾರುತಿ ದೇವರ ದರ್ಶನ ಪಡೆದ ಡಾ. ರಮೇಶ್ ಮಹಾದೇವಪ್ಪನವರ

ಹುಬ್ಬಳ್ಳಿ:- ಶ್ರಾವಣ ಮಾಸದ ನಿಮಿತ್ತ ಶ್ರೀ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಹುಬ್ಬಳ್ಳಿ: ಶ್ರಾವಣ ಮಾಸದ ಪವಿತ್ರ ನಿಮಿತ್ತ ಬೆಂಗೇರಿಯ ಶ್ರೀ ಮಾರುತಿ ದೇವಸ್ಥಾನದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ವಿಶೇಷ ಪೂಜೆ ಸಲ್ಲಿಸಿ, ಶ್ರೀ ಮಾರುತಿ ದೇವರ ದರ್ಶನ ಪಡೆದರು.೮

ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ಡಾ. ರಮೇಶ್ ಮಹಾದೇವಪ್ಪನವರ, ನಮ್ಮ ಭಾಗದಲ್ಲಿ ಉತ್ತಮ ಮಳೆಯಾಗಿ ರೈತರು ಹಾಗೂ ಜನತೆ ಸಮೃದ್ಧಿಯಾಗಿರಲಿ, ಎಲ್ಲರಿಗೂ ಸುಖ-ಶಾಂತಿ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.
ದೇವಸ್ಥಾನದ ಧಾರ್ಮಿಕ ವಾತಾವರಣದಲ್ಲಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.