ಮೊಹರಂ ಅಂಗವಾಗಿ ನಾಗಶೆಟ್ಟಿಕೊಪ್ಪದಲ್ಲಿ ಹೆಜ್ಜೆ ಮೇಳಕ್ಕೆ ಡಾ.ರಮೇಶ್ ಮಹಾದೇವಪ್ಪನವರ ಚಾಲನೆ

ಮೊಹರಂ ಅಂಗವಾಗಿ ನಾಗಶೆಟ್ಟಿಕೊಪ್ಪದಲ್ಲಿ ಹೆಜ್ಜೆ ಮೇಳಕ್ಕೆ ಡಾ.ರಮೇಶ್ ಮಹಾದೇವಪ್ಪನವರ ಚಾಲನೆ

ಹುಬ್ಬಳ್ಳಿ: ಮೊಹರಂ ಹಬ್ಬದ ಅಂಗವಾಗಿ ನಾಗಶೆಟ್ಟಿಕೊಪ್ಪದಲ್ಲಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ಹೆಜ್ಜೆ ಮೇಳಕ್ಕೆ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಹೆಜ್ಜೆ ಹಾಕುವ ಭಕ್ತರಿಗೆ ಛತ್ರಿಗಳನ್ನು ವಿತರಿಸಿ, ತಾವೂ ಹೆಜ್ಜೆ ಹಾಕುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. 

ಮೊಹರಂ ಹಬ್ಬವು ಸೌಹಾರ್ದತೆ, ತ್ಯಾಗ ಹಾಗೂ ಮಾನವೀಯ ಮೌಲ್ಯಗಳ ಸಂಕೇತವಾಗಿದ್ದು, ಸಮಾಜದಲ್ಲಿ ಸರ್ವಧರ್ಮ ಸಮನ್ವಯ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಮುಖಂಡರು, ಯುವಕರು, ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಮೊಹರಂ ಹಬ್ಬದ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ನಾಗಶೆಟ್ಟಿಕೊಪ್ಪ ಪ್ರದೇಶದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಹೆಜ್ಜೆ ಮೇಳವು ಭಕ್ತಿಭಾವ ಮತ್ತು ಸೌಹಾರ್ದತೆಯ ವಾತಾವರಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ... ಮಾರುತಿ ಬಿಳಗಿ,ರಾಜು ಕಾಳೆ,ರವಿಚಂದ್ರ ದೊಡ್ಡಿಹಾಳ,ಶ್ರೀನಿವಾಸ ವಾಲಿಕಾರ,ವೆಂಕಟೇಶ ಚಿಚಡಿ,ರವಿ ಮಳಗಿ,ನದಾಪ್ ,ಹಾಗೂ ಮುಲ್ಲಾ ಬಂಧುಗಳ ಇದ್ದರು.