ಸರಳತೆ ಹಾಗೂ - ಸ್ಪಂದನೆಗೆ ಸಾಕ್ಷಿಯಾದ ಜನಪ್ರಿಯ ಶಾಸಕ ವಿನಯ್ ಕುಲಕರ್ಣಿ ನಡೆ ಕಾರ್ಯಕರ್ತರೊಂದಿಗೆ ಆತ್ಮೀಯ ಸಂವಾದ!`

ಸರಳತೆ ಹಾಗೂ - ಸ್ಪಂದನೆಗೆ ಸಾಕ್ಷಿಯಾದ ಜನಪ್ರಿಯ ಶಾಸಕ ವಿನಯ್ ಕುಲಕರ್ಣಿ ನಡೆ ಕಾರ್ಯಕರ್ತರೊಂದಿಗೆ ಆತ್ಮೀಯ ಸಂವಾದ!`

ಬೆಂಗಳೂರು:- ಧಾರವಾಡ ಗ್ರಾಮೀಣ ಕ್ಷೇತ್ರದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಜನಪರ ಕಾಳಜಿ ಮೆರೆದಿರುವ ಶಾಸಕ ವಿನಯ್ ಕುಲಕರ್ಣಿ ಅವರನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಗೌರಮ್ಮಾ ಬಲೋಗಿ ಅವರು ಬೆಂಗಳೂರಿನಲ್ಲಿ ಭೇಟಿ ಮಾಡಿ, ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಶಾಸಕರನ್ನು ಭೇಟಿ ಮಾಡಿದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ತಮ್ಮ ಭಾಗದಲ್ಲಿನ ರಸ್ತೆ, ಮೂಲಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಜನರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಶಾಸಕ ವಿನಯ್ ಕುಲಕರ್ಣಿ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಕರೆ ಮಾಡಿ, “ಜನರಿಗೆ ತೊಂದರೆಯಾಗದಂತೆ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿ” ಎಂದು ಸೂಚನೆ ನೀಡಿದರು.

ಜನರ ಸಮಸ್ಯೆಗಳನ್ನು ಕೇವಲ ಆಲಿಸುವುದಷ್ಟೇ ಅಲ್ಲದೆ, ಪ್ರತಿಯೊಬ್ಬರೊಂದಿಗೂ ಖುದ್ದಾಗಿ ಮಾತನಾಡಿ ಅವರ ಅಹವಾಲುಗಳನ್ನು ವಿಚಾರಿಸಿದ ಶಾಸಕ ವಿನಯ್ ಕುಲಕರ್ಣಿ ಅವರ ಸರಳತೆ ಹಾಗೂ ಜನಪರ ಕಾಳಜಿ ಗಮನ ಸೆಳೆಯಿತು.

ಇದರ ಜೊತೆಗೆ ಭೇಟಿಗೆ ಆಗಮಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಸಿ, ಅವರ ಆರೋಗ್ಯದ ಬಗ್ಗೆಯೂ ವಿಚಾರಿಸಿಕೊಂಡರು. 

ಶಾಸಕರ ಈ ಆತ್ಮೀಯ ನಡೆ ಸಾರ್ವಜನಿಕರು ಹಾಗೂ ಕಾರ್ಯಕರ್ತರಲ್ಲಿ ಮೆಚ್ಚುಗೆಗೆಸತತ ಪಾತ್ರವಾಯಿತು.

ಅಧಿಕಾರಿಗಳೊಂದಿಗೆ ನೇರವಾಗಿ ಸಂಪರ್ಕಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು, ಜನರೊಂದಿಗೆ ಆತ್ಮೀಯವಾಗಿ ಬೆರೆಯುವುದು ಹಾಗೂ ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಮೂಲಕ ಶಾಸಕ ವಿನಯ್ ಕುಲಕರ್ಣಿ ಅವರು ಮತ್ತೊಮ್ಮೆ ತಮ್ಮ ಜನಪರ ನಾಯಕತ್ವವನ್ನು ಮೆರೆದಿದ್ದಾರೆ.

ಈ ಸಂದರ್ಭದಲ್ಲಿ, ವಿಜಯಲಕ್ಷ್ಮಿ ಅನಾಡ್, ಶಾರದಾ ನಿಗದಿ, ಬಾಳಮ್ಮ ಜಂಗಿನವರ, ಅಕ್ಕಮ್ಮ ಕಂಬಳಿ, ರೇಷ್ಮಾ ಶೇಕ್ ಸನದಿ,ಉಪಸ್ಥಿತರಿದ್ದರು.