"ನುಲಿಯ ಚಂದಯ್ಯ" ಜಯಂತೋತ್ಸವ; ಅದ್ದೂರಿ ಮೆರವಣಿಗೆ ನುಲಿಯ ಚಂದಯ್ಯನವರ ಕಾಯಕ ತತ್ವಗಳು ಬದುಕಿಗೆ ಪ್ರೇರಣೆ: ಡಾ. ರಮೇಶ್ ಮಹಾದೇವಪ್ಪ 919ನೇ ಜಯಂತೋತ್ಸವ ಸಂಭ್ರಮ!
ಹುಬ್ಬಳ್ಳಿ: ನಗರದ ನಾಗಶೆಟ್ಟಿಕೊಪ್ಪದಲ್ಲಿ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯನವರ 919ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರು ಪಾಲ್ಗೊಂಡು, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ದುರ್ಗಮ್ಮ ಶಶಿಕಾಂತ್ ಬಿಜವಾಡ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಶಶಿಕಾಂತ್ ಬಿಜವಾಡ, ಮಾರುತಿ ಬೀಳಗಿ, ತಹಶೀಲ್ದಾರ್ ಮಹೇಶ್ ಗಸ್ತೆ, ಹಳ್ಯಾಳ ಸೇರಿದಂತೆ ಭಜಂತ್ರಿ ಬಂಧುಗಳು, ಗುರು-ಹಿರಿಯರು, ಮಹಿಳಾ ಮಂಡಳಿಯ ಸದಸ್ಯರು ಹಾಗೂ ಯುವಕ ಮಿತ್ರರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಡಾ. ರಮೇಶ್ ಮಹಾದೇವಪ್ಪನವರು, ಶಿವಶರಣ ಶ್ರೀ ನುಲಿಯ ಚಂದಯ್ಯನವರ ಆದರ್ಶಗಳು ಹಾಗೂ ಕಾಯಕ ತತ್ವಗಳು ನಮ್ಮೆಲ್ಲರ ಬದುಕಿಗೆ ಸದಾ ಪ್ರೇರಣೆಯಾಗಲಿ ಎಂದು ಆಶಿಸಿದರು.
ಜಯಂತೋತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಭಕ್ತರು ಹಾಗೂ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ನುಲಿಯ ಚಂದಯ್ಯನವರ ತತ್ವ-ಆದರ್ಶಗಳನ್ನು ಸ್ಮರಿಸಿದರು.
yallu