ಹುಬ್ಬಳ್ಳಿ: ಕೇರಳದ ಪವಿತ್ರ ದೇವಸ್ಥಾನ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಡಾ. ರಮೇಶ್ ಮಹಾದೇವಪ್ಪ ಕುಟುಂಬ ಸಮೇತ ಭೇಟಿ ವಿಶೇಷ ಪೂಜೆ!ಜೆ
ಹುಬ್ಬಳ್ಳಿ: ಕೇರಳದ ಪವಿತ್ರ ಕ್ಷೇತ್ರಗಳಿಗೆ ಡಾ. ರಮೇಶ್ ಮಹಾದೇವಪ್ಪನವರ ಕುಟುಂಬ ಸಮೇತ ಭೇಟಿ
ಉದ್ಯಮಿ ಹಾಗೂ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ಕುಟುಂಬ ಸಮೇತರಾಗಿ ಕೇರಳದ ಪ್ರಸಿದ್ಧ ಹಾಗೂ ಪವಿತ್ರ ಕೊಟ್ಟಿಯೂರು ಶಿವ–ಪಾರ್ವತಿ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವ–ಪಾರ್ವತಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಬಳಿಕ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ದರ್ಶನ ಪಡೆದು ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು.
ಅನಂತರ ಕೇರಳದಲ್ಲಿರುವ ಶ್ರೀ ಮಾಡಾಯಿ ಶಿವನ ದೇವಸ್ಥಾನಕ್ಕೂ ಕುಟುಂಬದೊಂದಿಗೆ ಭೇಟಿ ನೀಡಿ, ವಿಶೇಷ ಪೂಜೆ ನೆರವೇರಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ದೇಶದ ಸಮಸ್ತ ಜನರ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಗವಂತನ ದಯಾಕಟಾಕ್ಷವು ಎಲ್ಲರ ಮೇಲೂ ಸದಾ ಇರಲಿ ಎಂದು ಡಾ. ರಮೇಶ್ ಮಹಾದೇವಪ್ಪನವರ ಹಾಗೂ ಧರ್ಮಪತ್ನಿ ಗೀತಾ ರಮೇಶ್ ಅವರು ಪ್ರಾರ್ಥಿಸಿದರು.
yallu