ಮಳೆಗಾಗಿ ಕಪ್ಪೆ ಮದುವೆ ಮಾಡಿ "ಬುಜ್ಜಿ ಬುಜ್ಜಿ ಬಾರೋ ಮಳೆರಾಯ ಎಂದ ಬೇಂಗೆರಿ ನಿವಾಸಿಗಳು!
ಹುಬ್ಬಳ್ಳಿ: ಸಮರ್ಪಕ ಮಳೆಯಾಗಲಿ ಎಂಬ ಆಶಯದಿಂದ ಹುಬ್ಬಳ್ಳಿಯ ಬೇಂಗೆರಿ ನಿವಾಸಿಗಳು ದ್ಯಾಮವ್ವದೇವಿ ದೇವಸ್ಥಾನ ಬಳಿ ವಿಶಿಷ್ಟ ಸಂಪ್ರದಾಯದಂತೆ ಕಪ್ಪೆಗಳಿಗೆ ಮದುವೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮಳೆ ಕೊರತೆಯಿಂದ ಆತಂಕಗೊಂಡಿದ್ದ ಸ್ಥಳೀಯರು, ಉತ್ತಮ ಮಳೆಯಾಗಲಿ ಹಾಗೂ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಪ್ಪೆ ಮದುವೆ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ನೆರವೇರಿಸಿದರು. ಬುಜ್ಜಿ ಬುಜ್ಜಿ ಬಾರೋ ಮಳೆರಾಯ ಎಂದು ಬೇಡಿಕೊಂಡರು.
ಗ್ರಾಮಸ್ಥರು ಕಪ್ಪೆಗಳನ್ನು ಅಲಂಕರಿಸಿ, ಮದುವೆ ವಿಧಿ-ವಿಧಾನಗಳನ್ನು ನಡೆಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಿಳೆಯರು ಸಹ ಸಂಪ್ರದಾಯಬದ್ಧವಾಗಿ ಭಾಗವಹಿಸಿ, "ಮಳೆ ಬಾರಯ್ಯ" ಎಂದು ಹಾಡುತ್ತಾ ವಿಶೇಷ ಆಚರಣೆ ನಡೆಸಿದರು. ಮಳೆ ದೇವರನ್ನು ಪ್ರಾರ್ಥಿಸುವ ಉದ್ದೇಶದಿಂದ ಒಂದಯ ಸುತ್ತು ಒಡೆದು ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು.
ಈ ವಿಶಿಷ್ಟ ಆಚರಣೆ ಸ್ಥಳೀಯರ ಗಮನ ಸೆಳೆದಿದ್ದು, ಶೀಘ್ರದಲ್ಲೇ ಉತ್ತಮ ಮಳೆಯಾಗಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದರು. ಗ್ರಾಮೀಣ ಭಾಗಗಳಲ್ಲಿ ಮಳೆಯಿಗಾಗಿ ಇಂತಹ ಆಚರಣೆಗಳನ್ನು ನಡೆಸುವ ಪದ್ಧತಿ ಇಂದಿಗೂ ಜೀವಂತವಾಗಿರುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ.ರಮೇಶ್ ಮಹಾದೇವಪ್ಪನವರ, ಮಹಾನಗರ ಪಾಲಿಕೆ ಸದಸ್ಯ ಎಮ್.ವಾಯ್ ನರಗುಂದ, ಬೀರಪ್ಪ ಕಂಡೆಕರ್,ಹುವಪ್ಪ ದಾಯಗೋಡಿ, ರಾಜುಕಾಳೆ,ರವಿ ಮಳಗಿ,ಅಡವೆಪ್ಪ ಹೊಸಮನಿ,ಸತಿಶ್ ಬೊಮ್ಮನಹಳ್ಳಿ, ಕಲ್ಲಫ್ಪ ಹೊಸಮನಿ,ಬಸಮ್ಮಾ ಹೋಳಿ,ಸೇರಿದಂತೆ ಮಹಿಳಾ ಮಂಡಳಿದವ್ರು ಸೇರಿದಂತೆ ಗುರು ಹಿರಿಯರು ಉಪಸ್ಥಿತರಿದ್ದರು.
yallu