ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ ನೇತೃತ್ವದಲ್ಲಿ "ಮಳೆಗಾಗಿ"ಆದಿಶಕ್ತಿ ದೇವಸ್ಥಾನದಲ್ಲಿ ವಿಶೇಷ ಅಂಬಲಿ ಪೂಜೆ; ಮಳೆ ಸುರಿದ ಹಿನ್ನೆಲೆ ಸಂತಸ ವ್ಯಕ್ತಪಡಿಸಿದ ಮಹಿಳೆಯರು

ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ ನೇತೃತ್ವದಲ್ಲಿ "ಮಳೆಗಾಗಿ"ಆದಿಶಕ್ತಿ ದೇವಸ್ಥಾನದಲ್ಲಿ ವಿಶೇಷ ಅಂಬಲಿ ಪೂಜೆ; ಮಳೆ ಸುರಿದ ಹಿನ್ನೆಲೆ ಸಂತಸ ವ್ಯಕ್ತಪಡಿಸಿದ ಮಹಿಳೆಯರು

ಧಾರವಾಡ: ಮಳೆಯ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ ರೈತರು ಸಂತಸದಿಂದ ಇರಲೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ ಅವರ ನೇತೃತ್ವದಲ್ಲಿ ಧಾರವಾಡದ ಆದಿಶಕ್ತಿ ದೇವಸ್ಥಾನದಲ್ಲಿ ವಿಶೇಷ ಅಂಬಲಿ ಪೂಜೆ ನಡೆಸಲಾಗಿತ್ತು.

 ಸಂಪ್ರದಾಯದಂತೆ ಮಡಿಕೆಯಲ್ಲಿ ಜೋಳದ ಅಂಬಲಿ ತುಂಬಿ ವಿಶೇಷ ಪೂಜೆ ಸಲ್ಲಿಸಿ ಮಳೆಯಿಗಾಗಿ ಬಳಸಿಕೊಂಡಿದ್ದರು. ಈಗ ಪೂಜೆ ನಡೆದ ಕೆಲವೇ ದಿನಗಳಲ್ಲಿ ಧಾರವಾಡ ನಗರದಲ್ಲಿ ಉತ್ತಮ ಮಳೆಯಾಗಿದ್ದು, ಇದರಿಂದ ಮಹಿಳೆಯರಲ್ಲಿ ಸಂತಸ ಮನೆಮಾಡಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿದ ಗೌರಮ್ಮಾ ಬಲೋಗಿ ಅವರು, ರೈತರಿಗೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆಯಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ವಾಣಿ ಶಿಲಿನ್, ರೋಹಿಣಿ ತರ್ಲಗಟ್ಟಿ, ಮಂಜುಳಾ ತೋಟಗಿ, ಸುಶೀಲ ಹಿರೇಮಠ, ಭಾರತಿ ಆಯಟ್ಟಿ, ವಿಜು ಮಲ್ಲಿಗಾವಾದ, ಶೋಭಾ ಕರಿಸುಬ್ಬಾನವರ, ಆಶಾ ಕದಂ, ಸುರೇಖಾ ಸಂಕೇಶ್ವರಿ ಸೇರಿದಂತೆ ನೂರಾರು ಮಹಿಳೆಯರು ಹಾಗೂ ಸ್ಥಳೀಯರು ಭಾಗವಹಿಸಿ, ಸಮೃದ್ಧ ಮಳೆಯಾಗಲಿ ಮತ್ತು ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು.

ಸಾಂಪ್ರದಾಯಿಕ ಆಚರಣೆ ಹಾಗೂ ಭಕ್ತಿಭಾವದಿಂದ ನಡೆದ ಈ ವಿಶೇಷ ಅಂಬಲಿ ಪೂಜೆ ಧಾರವಾಡ ನಗರದಲ್ಲಿ ಗಮನ ಸೆಳೆದಿದ್ದು, ಉತ್ತಮ ಮಳೆಯೊಂದಿಗೆ ರೈತರ ಮುಖದಲ್ಲಿ ನಗು ಮೂಡಲಿ ಎಂಬ ಆಶಯವನ್ನು ಮಹಿಳೆಯರು ವ್ಯಕ್ತಪಡಿಸಿದರು.