ಡಾ.ಎಲ್ ಆರ್. ಬೂದಿಹಾಳ ನೇತೃತ್ವದಲ್ಲಿ "ಶಾಸಕ ವಿನಯ್ ಕುಲಕರ್ಣಿ" ಅವರಿಗೆ ವಿಶೇಷ ಸನ್ಮಾನ

ಡಾ.ಎಲ್ ಆರ್. ಬೂದಿಹಾಳ ನೇತೃತ್ವದಲ್ಲಿ "ಶಾಸಕ ವಿನಯ್ ಕುಲಕರ್ಣಿ" ಅವರಿಗೆ ವಿಶೇಷ ಸನ್ಮಾನ

ಧಾರವಾಡ: ಶಾಸಕ ವಿನಯ್ ಕುಲಕರ್ಣಿ ಅವರನ್ನು ಡಾ. ಎಲ್.ಆರ್. ಬೂದಿಹಾಳ ಅವರ ನೇತೃತ್ವದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಶಾಸಕ ವಿನಯ್ ಕುಲಕರ್ಣಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಅವರ ಸೇವೆ ಹಾಗೂ ಜನಪರ ಕಾರ್ಯಗಳನ್ನು ಮೆಚ್ಚಿ ಸನ್ಮಾನಿಸಲಾಯಿತು. 

ಈ ವೇಳೆ ಡಾ. ಎಲ್.ಆರ್. ಬೂದಿಹಾಳ ಅವರು ಶಾಲು ಹೊದಿಸಿ, ಹಾರ ಹಾಕಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರಾಜೇಶ್ವರಿ ಕಿರೆಸೂರ, ನವಲಗುಂದ ಡಿಪೋ ಮ್ಯಾನೇಜರ್ ಮಾರುತಿ ಹೊಸಕೋಟೆ ಸೇರಿದಂತೆ ಹಲವು ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.