ಹಳೇ ವೈಷಮ್ಯ ಹಿನ್ನೆಲೆ: ಜೀವ ಬೆದರಿಕೆ, 80 ಗ್ರಾಂ ಬಂಗಾರದ ಬಳೆ ಕಳ್ಳತನ ಆರೋಪ
ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಮಹಿಳೆಯ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದಲ್ಲದೆ, ದೇವರ ಕೋಣೆಯಲ್ಲಿದ್ದ ಸುಮಾರು 80 ಗ್ರಾಂ ತೂಕದ, ಅಂದಾಜು 8 ಲಕ್ಷ ಮೌಲ್ಯದ ಬಂಗಾರದ ಬಳೆಗಳನ್ನು ತೆಗೆದುಕೊಂಡು ಹೋದ ಆರೋಪದಡಿ ಓರ್ವನ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೋಹನ್ ಬಿ. ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಯು ಮಹಿಳೆಯ ಮನೆಗೆ ತೆರಳಿ, "ನನ್ನ ವಿರುದ್ಧ ಸಾಕ್ಷಿ ಹೇಳುತ್ತೀಯಾ? ನಿನಗೆ ಒಂದು ಗತಿ ಕಾಣಿಸುತ್ತೇನೆ. ನಾನು ಕೋರ್ಟ್ಗೆ ಓಡಾಡಿ ಹಣ ಖರ್ಚು ಮಾಡಿದ್ದೇನೆ. ಆ ಹಣ ಕೊಡು, ಇಲ್ಲವಾದರೆ ಬಂಗಾರ ಕೊಡು" ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ದೇವರ ಕೋಣೆಯಲ್ಲಿಟ್ಟಿದ್ದ ಬಂಗಾರದ ಬಳೆಗಳನ್ನು ತೆಗೆದುಕೊಂಡು ಹೋಗಿರುವುದಾಗಿ ರೂಪಾ ಅವರು ನೀಡಿದ ದೂರಿನ ಆಧಾರದ ಮೇಲೆ ಬೆಂಡಿಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ತನಿಖೆ ಮುಂದುವರಿದಿದೆ.
yallu