ವರುಣನ ಕೃಪೆಗಾಗಿ ಬೆಂಗೇರಿಯಲ್ಲಿ ವಿಶೇಷ ಪೂಜೆ; ಭಕ್ತರಿಗೆ ಅಂಬಲಿ ಪ್ರಸಾದ ವಿತರಣೆ
ಹುಬ್ಬಳ್ಳಿ: ಮಳೆ ಸಮೃದ್ಧಿಯಾಗಿ ಸುರಿದು ನಾಡಿನಲ್ಲಿ ಸುಭಿಕ್ಷ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಹುಬ್ಬಳ್ಳಿಯ ಬೆಂಗೇರಿಯ ಗ್ರಾಮ ದೇವತಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಲಲಿತಾ ಸಹಸ್ರನಾಮ ಮಹಿಳಾ ಮಂಡಳಿಯ ಸಹಯೋಗದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಅಂಬಲಿ ಪ್ರಸಾದವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಬೀರಪ್ಪ ಕಂಡೆಕರ್, ಮಾಜಿ ಸದಸ್ಯ ಹೂವಪ್ಪ ದಾಯಗೋಡಿ, ದಶರಥ ಕಾಳ, ಗುರುಸಿದ್ದಪ್ಪ ಕುಂದಗೋಳ, ವೆಂಕಪ್ಪ ನಾಯ್ಕರ್, ಗುಳಪ್ಪ ಪಟಾಯತ್, ಕಲ್ಲಪ್ಪ ಹೊಸಮನಿ, ಅಡಿವಪ್ಪ ಹೊಸಮನಿ ಸೇರಿದಂತೆ ಲಲಿತಾ ಸಹಸ್ರನಾಮ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಈ ವೇಳೆ ಜಗತ್ತಿಗೆ ಜೀವನಾಡಿಯಾದ ಮಳೆಯು ಸಮೃದ್ಧಿಯಾಗಿ ಸುರಿದು ರೈತರ ಬದುಕು ಹಸನಾಗಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ರಾಜ್ಯದಲ್ಲಿ ಶಾಂತಿ, ಸುಭಿಕ್ಷ ಮತ್ತು ಸಮೃದ್ಧಿ ನೆಲೆಸಲಿ ಎಂದು ಗ್ರಾಮ ದೇವತೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮವು ಭಕ್ತಿಭಾವ ಮತ್ತು ಧಾರ್ಮಿಕ ವಾತಾವರಣದಲ್ಲಿ ನೆರವೇರಿತು.
yallu