ಹುಬ್ಬಳ್ಳಿಯಲ್ಲಿ ಸ್ಪಾ ಹೆಸರಿನಲ್ಲಿ ಹೊಸ ಆಟ? ಆರೋಪಗಳ ಸುತ್ತ ಪ್ರಶ್ನೆಗಳ ಸುರಿಮಳೆ!
ಹಬ್ಬಳ್ಳಿ: ನಗರದಲ್ಲಿರುವ ಒಂದು ಸ್ಪಾ ಸೆಂಟರ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಫೋಟೋಗಳನ್ನು ಸ್ಟೇಟಸ್ ಆಗಿ ಬಳಸಿಕೊಂಡು ಗ್ರಾಹಕರನ್ನು ಸೆಳೆಯುವ ಮೂಲಕ ಸ್ಪಾ ನಡೆಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸ್ಪಾ ಹೆಸರಿನಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಮಹಿಳೆಯರ ಫೋಟೋಗಳನ್ನು ಬಳಸಿ ಪ್ರಚಾರ ಮಾಡುವುದು ನಿಯಮಬದ್ಧವೇ? ಈ ರೀತಿಯ ಪ್ರಚಾರ ಮಾಡುವ ಉದ್ದೇಶವೇನು? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.
ನಗರದಲ್ಲಿ ಕೆಲವು ಸ್ಪಾ ಕೇಂದ್ರಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಕೆಲವೆಡೆ ಸ್ಪಾ ಹೆಸರಿನಲ್ಲಿ ಬೇರೆ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಪೊಲೀಸರು ಸಮಗ್ರ ತನಿಖೆ ನಡೆಸಿ, ಆರೋಪಗಳಲ್ಲಿ ಸತ್ಯಾಂಶ ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕಾನೂನು ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಸ್ಪಾ ಸೆಂಟರ್ ವಿರುದ್ಧ ಅಷ್ಟೇ ಅಲ್ಲಾ, ಅಂತಹ ಚಟುವಟಿಕೆಗಳಿಗೆ ಸ್ಥಳ ಬಾಡಿಗೆ ನೀಡಿರುವ ಕಟ್ಟಡ ಮಾಲೀಕರ ಪಾತ್ರವೂ ಪರಿಶೀಲನೆ ಮಾಡಬೇಕಾಗುತ್ತದೆ.
ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ? ಸ್ಪಾ ಹೆಸರಿನಲ್ಲಿ ನಡೆಯುತ್ತಿದೆ ಎನ್ನಲಾದ ಈ ಹೊಸ ಆಟಕ್ಕೆ ಯಾವಾಗ ಬ್ರೇಕ್ ಬೀಳಲಿದೆ? ಎಂಬುದನ್ನು ಕಾದು ನೋಡಬೇಕಿದೆ...
ವರದಿ- ರಾಜು ಮುದ್ಗಲ್ ಹುಬ್ಬಳ್ಳಿ....!
yallu