ಅಷ್ಪಾಕ್ ಕುಮಟಾಕರ್ ನೇತೃತ್ವದಲ್ಲಿ ಎಐಸಿಸಿ ವೀಕ್ಷಕ ಸೈಯದ್ ಅಜ್ಮತುಲ್ಲಾ ಹುಸೇನಿಗೆ ಆತ್ಮೀಯ ಸತ್ಕಾರ!

ಅಷ್ಪಾಕ್ ಕುಮಟಾಕರ್ ನೇತೃತ್ವದಲ್ಲಿ ಎಐಸಿಸಿ ವೀಕ್ಷಕ ಸೈಯದ್ ಅಜ್ಮತುಲ್ಲಾ ಹುಸೇನಿಗೆ ಆತ್ಮೀಯ ಸತ್ಕಾರ!

ಅಷ್ಪಾಕ್ ಕುಮಟಾಕರ್ ನೇತೃತ್ವದಲ್ಲಿ ಎಐಸಿಸಿ ವೀಕ್ಷಕ ಸೈಯದ್ ಅಜ್ಮತುಲ್ಲಾ ಹುಸೇನಿಗೆ ಆತ್ಮೀಯ ಸತ್ಕಾರ


ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ವೀಕ್ಷಕರಾಗಿ ಆಗಮಿಸಿದ ಸೈಯದ್ ಅಜ್ಮತುಲ್ಲಾ ಹುಸೇನ್ ಅವರಿಗೆ ಕಾಂಗ್ರೆಸ್ ಮುಖಂಡ ಅಷ್ಪಾಕ್ ಕುಮಟಾಕರ್ ಅವರ ನೇತೃತ್ವದಲ್ಲಿ ಆತ್ಮೀಯವಾಗಿ ಸತ್ಕರಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಅಷ್ಪಾಕ್ ಕುಮಟಾಕರ್ ಅವರು ಪುಷ್ಪಗುಚ್ಛ ಹಾಗೂ ಸನ್ಮಾನ ಶಾಲು ನೀಡಿ ಗೌರವಿಸಿ, ಪಕ್ಷದ ಸಂಘಟನೆ ಬಲವರ್ಧನೆ, ಮುಂಬರುವ ರಾಜಕೀಯ ಚಟುವಟಿಕೆಗಳು ಹಾಗೂ ಕಾರ್ಯಕರ್ತರ ಸಂಘಟನೆಯ ಕುರಿತು ವೀಕ್ಷಕರೊಂದಿಗೆ ಚರ್ಚೆ ನಡೆಸಿದರು.


ಎಐಸಿಸಿ ವೀಕ್ಷಕ ಸೈಯದ್ ಅಜ್ಮತುಲ್ಲಾ ಹುಸೇನ್ ಅವರು ಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠವಾಗಲು ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ಸ್ಥಳೀಯ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.