ತಹಶಿಲ್ದಾರ ಮಹೇಶ್ ಗಸ್ತೆ ಅವರಿಗೆ ರಾಖಿ ಕಟ್ಟುವ ಮೂಲಕ ಸಹೋದರತ್ವದ ಸಂದೇಶ ಸಾರಿದ ಬ್ರಹ್ಮಕುಮಾರಿ ಸಹೋದರಿಯರು!

ತಹಶಿಲ್ದಾರ ಮಹೇಶ್ ಗಸ್ತೆ ಅವರಿಗೆ ರಾಖಿ ಕಟ್ಟುವ ಮೂಲಕ ಸಹೋದರತ್ವದ ಸಂದೇಶ ಸಾರಿದ ಬ್ರಹ್ಮಕುಮಾರಿ ಸಹೋದರಿಯರು!

ಹುಬ್ಬಳ್ಳಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿಯರು ಇಂದು ಹುಬ್ಬಳ್ಳಿ ತಹಶೀಲ್ದಾರ್ ಮಹೇಶ್ ಭಗವಂತ ಗಸ್ತೆ ಅವರನ್ನು ಭೇಟಿಯಾಗಿ ರಕ್ಷಾ ಬಂಧನದ ಅಂಗವಾಗಿ ರಾಖಿ ಕಟ್ಟುವ ಮೂಲಕ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್ ಭಗವಂತ ಗಸ್ತೆ ಅವರು ಸಹೋದರಿಯರಿಂದ ರಾಖಿ ಕಟ್ಟಿಸಿಕೊಂಡು, ಅವರಿಗೆ ಸಿಹಿ ನೀಡವ ಮೂಲಕ ರಕ್ಷಾ ಬಂಧನದ ಶುಭಾಶಯಗಳನ್ನು ತಿಳಿಸಿದರು.

ಪ್ರತಿ ವರ್ಷವೂ ಬ್ರಹ್ಮಕುಮಾರಿ ಸಹೋದರಿಯರು ತಮ್ಮನ್ನು ಭೇಟಿ ಮಾಡಿ ರಾಖಿ ಕಟ್ಟುತ್ತಿರುವುದು ಸಂತಸದ ಸಂಗತಿಯಾಗಿದೆ. ರಕ್ಷಾ ಬಂಧನವು ಸಹೋದರ–ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಬ್ಬವಾಗಿದೆ ಎಂದು ಅವರು ಹೇಳಿದರು.