ರೈತನ ಬೆವರಿನ ಪ್ರತಿಯೊಂದು ಹನಿಗೂ ಗೌರವ ಸಿಗಲಿ – ಡಾ. ರಮೇಶ್ ಮಹಾದೇವಪ್ಪನವರ
ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಡಾ. ವಾಸುದೇವ ಮೇಟಿ ಬಣ, ಧಾರವಾಡ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಲಾದ ರೈತ ಜಾಗೃತ ಸಮಾವೇಶದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರು ಭಾಗವಹಿಸಿ ರೈತರ ಹಕ್ಕು, ಗೌರವ ಹಾಗೂ ಅಭಿವೃದ್ಧಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಡಾ. ರಮೇಶ್ ಮಹಾದೇವಪ್ಪನವರಿಗೆ ಸಂಘಟನೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಸದ್ಗುರು ಡಾ. ಶಿವಕುಮಾರ ಮಹಾಸ್ವಾಮಿಗಳು (ಅಣ್ಣಿಗೇರಿ) ಹಾಗೂ ಸದ್ಗುರು ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು (ಮಂಟೂರು) ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಡಾ. ವಾಸುದೇವ ಮೇಟಿ, ಶ್ರೀ ಶಿವಾನಂದ ಬೆಂತೂರ್, ಶ್ರೀ ರಾಜಣ್ಣ ಕೊರವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ರೈತ ಬಂಧುಗಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
ಈ ವೇಳೆ ಮಾತನಾಡಿದ ಡಾ. ರಮೇಶ್ ಮಹಾದೇವಪ್ಪನವರು, "ರೈತ ಉಳಿದರೆ ದೇಶ ಉಳಿಯುತ್ತದೆ. ರೈತನ ಬೆವರಿನ ಪ್ರತಿಯೊಂದು ಹನಿಗೂ ಗೌರವ ಸಿಗುವ ಸಮಾಜ ```ನಿರ್ಮಾಣವಾಗಬೇಕು``. ರೈತರ ಹಕ್ಕುಗಳನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ" ಎಂದು ಕರೆ ನೀಡಿದರು.
yallu