ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಅಂತಿಮ ಅಧಿಸೂಚನೆಗೆ ಸಿಎಂ ಡಿಕೆ ಶಿವಕುಮಾರ್ ಸಹಿ
ಬೆಂಗಳೂರುನಲ್ಲಿ ಇಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೋರಾಟ ಸಮಿತಿಯ ನಿಯೋಗ ಹಾಗೂ ಕಾಂಗ್ರೆಸ್ ಯುವ ಮುಖಂಡ ನಾಗರಾಜ್ ಗೌರಿ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯ ಅಗತ್ಯತೆ ಮತ್ತು ಅದರ ಮಹತ್ವ ಕುರಿತು ನಿಯೋಗವು ಮುಖ್ಯಮಂತ್ರಿಗಳಿಗೆ ವಿವರಿಸಿತು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಹಾಲಿ ಮಹಾನಗರ ಪಾಲಿಕೆ ಸದಸ್ಯರ ಅಧಿಕಾರಾವಧಿ ಹಾಗೂ ಏಪ್ರಿಲ್ ತಿಂಗಳು 2027 ರಲ್ಲಿ ಜಾರಿಗೆ ಬರುವ ಹಾಗೆ ಟಿಪ್ಪಣಿ ಬರೆದು ಮುಖ್ಯ ಕಾರ್ಯದರ್ಶಿಗಳ ಕಳುಹಿಸಿದರು.
ಇನ್ನೂ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಜಾರಿಗೆ ಬರುವಂತೆ ಅಂತಿಮ ಅಧಿಸೂಚನೆಗೆ ಸಹಿ ಹಾಕಿದರು ಎಂದು ತಿಳಿದುಬಂದಿದೆ.
ಬಳಿಕ. ಸಿಎಂ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿ.ಡಿ. ಹಿರೇಮಠ್, ನಾಗರಾಜ್ ಗೌರಿ, ವೆಂಕಟೇಶ್ ಮಾಚಕನೂರ್, ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ, ವಿಠ್ಠಲ ಕಮ್ಮಾರ, ಶಂಕರ್ ನೀರಾವರಿ, ದಾನಪ್ಪ ಕಬ್ಬೆರ್, ರಾಜು ಕಮತಿ, ಗುರುರಾಜ ಹುಣಶಿಮರದ, ರವಿ ಮಳಗೇರ, ದೇವಿಕಾ ಹುಬ್ಬಳ್ಳಿ, ವೀರಣ್ಣ ಶೆಟ್ಟರ್, ಶಕೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
yallu