ವರ್ಷಕ್ಕೊಮ್ಮೆ ಮಾತ್ರ ತೆರೆವ ಕಾಳುಗುಡಿ–ಬಾಳುಗುಡಿ ದೇವಸ್ಥಾನದಲ್ಲಿ ಡಾ. ರಮೇಶ್ ಮಹಾದೇವಪ್ಪನವರ ದೇವರ ದರ್ಶನ"

ವರ್ಷಕ್ಕೊಮ್ಮೆ ಮಾತ್ರ ತೆರೆವ ಕಾಳುಗುಡಿ–ಬಾಳುಗುಡಿ ದೇವಸ್ಥಾನದಲ್ಲಿ ಡಾ. ರಮೇಶ್ ಮಹಾದೇವಪ್ಪನವರ ದೇವರ ದರ್ಶನ"

Karnataka: ಯಲ್ಲಾಪುರ ಸಮೀಪದ ಕೋಳಿಕೆರೆಯಲ್ಲಿರುವ, ವರ್ಷದಲ್ಲಿ ಕೇವಲ ಒಂದು ದಿನ ಮಾತ್ರ ಭಕ್ತರಿಗೆ ದರ್ಶನ ನೀಡುವ ಪವಿತ್ರ ಕಾಳುಗುಡಿ–ಬಾಳುಗುಡಿ ದೇವಸ್ಥಾನಕ್ಕೆ ಡಾ. ರಮೇಶ್ ಮಹಾದೇವಪ್ಪನವರ ಅವರು ತಮ್ಮ ಗೆಳೆಯರ ಬಳಗದೊಂದಿಗೆ ಭೇಟಿ ನೀಡಿ, ಭಕ್ತಿಭಾವದಿಂದ ದೇವರ ದರ್ಶನ ಪಡೆದು ಪುನೀತರಾದರು.


ಈ ಪವಿತ್ರ ಕ್ಷೇತ್ರದಲ್ಲಿ ಭಕ್ತಿಯಿಂದ ಬೇಡಿಕೊಂಡ ಮನೋಕಾಮನೆಗಳು ಈಡೇರುತ್ತವೆ ಎಂಬುದು ಸಾವಿರಾರು ಭಕ್ತರ ಅಚಲ ನಂಬಿಕೆಯಾಗಿದೆ. ಅಪಾರ ಭಕ್ತಿ, ನಂಬಿಕೆ ಮತ್ತು ದೈವಿಕ ಅನುಭವವನ್ನು ನೀಡುವ ಈ ಕ್ಷೇತ್ರವು ಭಕ್ತರ ಪಾಲಿನ ಆಶಾಕಿರಣವಾಗಿ ಪ್ರಸಿದ್ಧಿ ಪಡೆದಿದೆ.


ನಿಸರ್ಗದ ಹಸಿರು ಮಡಿಲಿನಲ್ಲಿ ನೆಲೆಸಿರುವ ಈ ಅಪರೂಪದ ದೇವಾಲಯಕ್ಕೆ ಭೇಟಿ ನೀಡುವುದೇ ಒಂದು ಅವಿಸ್ಮರಣೀಯ ಅನುಭವ. ಮನಸ್ಸಿಗೆ ನೆಮ್ಮದಿ, ಆತ್ಮಕ್ಕೆ ಶಾಂತಿ ಹಾಗೂ ಬದುಕಿಗೆ ಹೊಸ ಭರವಸೆಯನ್ನು ನೀಡುವ ಈ ಪವಿತ್ರ ಕ್ಷೇತ್ರದ ದರ್ಶನ ಭಾಗ್ಯ ದೊರೆತಿರುವುದು ನಮ್ಮೆಲ್ಲರಿಗೂ ಸೌಭಾಗ್ಯ ಎಂದರು.


"ಶ್ರೀ ಕಾಳುಗುಡಿ–ಬಾಳುಗುಡಿ ದೇವರ ಕೃಪೆ ಸದಾ ಸರ್ವರ ಮೇಲಿರಲಿ. ಎಲ್ಲರ ಮನೋಕಾಮನೆಗಳು ಈಡೇರಲಿ. ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ಪ್ರತಿಯೊಬ್ಬರ ಜೀವನದಲ್ಲಿ ನೆಲೆಸಲಿ" ಎಂದು ಪ್ರಾರ್ಥಿಸಿದರು‌