ಹಿರಿಯ ನಾಯಕರೊಂದಿಗೆ ಹಳೆಯ ನೆನಪುಗಳು ವೈರಲ್; ಅಸ್ಪಾಕ್ ಕುಮಟಕಾರ್‌ಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಆಗ್ರಹ

ಹಿರಿಯ ನಾಯಕರೊಂದಿಗೆ ಹಳೆಯ ನೆನಪುಗಳು ವೈರಲ್; ಅಸ್ಪಾಕ್ ಕುಮಟಕಾರ್‌ಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಆಗ್ರಹ

ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ರಾಜಕೀಯದಲ್ಲಿ ಯುವ ಮುಖಂಡ ಅಸ್ಪಾಕ್ ಕುಮಟಕಾರ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂಬ ಒತ್ತಾಯ ಈಗ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಳೆಯ ಹೋರಾಟದ ಚಿತ್ರಗಳು ಮತ್ತು ಹಿರಿಯ ನಾಯಕರೊಂದಿಗಿನ ಅಪರೂಪದ ಫೋಟೋಗಳು ಈ ಚರ್ಚೆಗೆ ಮತ್ತಷ್ಟು ವೇಗ ನೀಡಿವೆ.


ಕಾಂಗ್ರೆಸ್ ಯುವ ಮುಖಂಡ ಅಸ್ಪಾಕ್ ಕುಮಟಕಾರ್ ಹಲವು ವರ್ಷಗಳಿಂದ ಪಕ್ಷ ಸಂಘಟನೆ, ಜನಪರ ಹೋರಾಟಗಳು ಹಾಗೂ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಳೆಯ ಚಿತ್ರಗಳಲ್ಲಿ, ಇಂದಿನ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ, ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಹಾಗೂ ವಿವಿಧ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ.

ಅದರಲ್ಲೂ ಬಿಜೆಪಿ-ಜೆಡಿಎಸ್ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಅಸ್ಪಾಕ್ ಕುಮಟಕಾರ್ ಸಕ್ರಿಯವಾಗಿ ಪಾಲ್ಗೊಂಡಿದ್ದ ಚಿತ್ರಗಳು ಕಾರ್ಯಕರ್ತರಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

ಪಕ್ಷದ ಕಷ್ಟಕಾಲದಿಂದಲೂ ದುಡಿಯುತ್ತಿರುವ ಅಸ್ಪಾಕ್ ಕುಮಟಕಾರ್ ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅನೇಕ ಯುವ ಕಾರ್ಯಕರ್ತರು ಮತ್ತು ಬೆಂಬಲಿಗರು ಒತ್ತಾಯ ವ್ಯಕ್ತಪಡಿಸುತ್ತಿದ್ದಾರೆ.

ಸಂಘಟನೆಗೆ ನಿಷ್ಠೆಯಿಂದ ದುಡಿದವರಿಗೆ ಸೂಕ್ತ ಗೌರವ ಸಿಗಬೇಕು ಎಂಬ ಅಭಿಪ್ರಾಯವೂ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದ್ದು ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣಿ ಹಾಕುತ್ತದೆ ಕಾದು ನೋಡಬೇಕಿದೆ.
ಆದರೆ, ಜಿಲ್ಲಾ ಅಧ್ಯಕ್ಷರ ನೇಮಕದ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಥವಾ ಪಕ್ಷದ ಅಧಿಕೃತ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ. ಹೀಗಾಗಿ ಈ ಬೇಡಿಕೆಗೆ ಪಕ್ಷ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕಾದು ನೋಡಬೇಕಿದೆ.


ಹಳೆ ಹೋರಾಟಗಳ ನೆನಪು, ಹಿರಿಯ ನಾಯಕರೊಂದಿಗೆ ಬೆಸೆದ ಒಡನಾಟ ಹಾಗೂ ಯುವ ಕಾರ್ಯಕರ್ತರ ಬೆಂಬಲದ ನಡುವೆ ಅಸ್ಪಾಕ್ ಕುಮಟಕಾರ್ ಅವರಿಗೆ ಮಹತ್ವದ ಜವಾಬ್ದಾರಿ ಸಿಗುತ್ತದೆಯೇ ಎಂಬುದು ಈಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.