ಕಳೆದುಹೋದ ಮೊಬೈಲ್‌ಗಳು ಮರಳಿ ಮಾಲೀಕರಿಗೆ – ನವನಗರ ಪೊಲೀಸರ ಶ್ಲಾಘನೀಯ ಸೇವೆ

ಕಳೆದುಹೋದ ಮೊಬೈಲ್‌ಗಳು ಮರಳಿ ಮಾಲೀಕರಿಗೆ – ನವನಗರ ಪೊಲೀಸರ ಶ್ಲಾಘನೀಯ ಸೇವೆ

ಕಳೆದುಹೋಗಿದ್ದ 15 ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ನವನಗರ ಪೊಲೀಸ್ ಠಾಣೆ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ


ಹುಬ್ಬಳ್ಳಿ: APMC ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 15 ಮೊಬೈಲ್ ಫೋನ್‌ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ಅವುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಿ ತಮ್ಮ ಕರ್ತವ್ಯ ಮೆರೆದಿದ್ದಾರೆ.

ಇನ್ನೂ  ಪೊಲೀಸ್ ಇನ್ಸ್‌ಪೆಕ್ಟರ್ ಜಯಂತ ಗೌಳಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಮುತ್ತು C.S., ಪುಂಡಲಿಕ ಚಲವಾದಿ ಹಾಗೂ ಪಿಸಿ ನಾಗಪ್ಪ ಕುದರಿ ಅವರ ತಂಡ ಮೊಬೈಲ್‌ಗಳನ್ನು ಕಡಿಮೆ ಅವಧಿಯಲ್ಲೇ ಪತ್ತೆಹಚ್ಚಿ, ಕಾನೂನುಬದ್ಧವಾಗಿ ಪರಿಶೀಲನೆ ನಡೆಸಿದ ಬಳಿಕ ನಿಜವಾದ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ.


ತಮ್ಮ ಅಮೂಲ್ಯ ಮೊಬೈಲ್‌ಗಳನ್ನು ಮರಳಿ ಪಡೆದ ಸಾರ್ವಜನಿಕರು ನವನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿ, ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ತೋರಿರುವ ಕರ್ತವ್ಯ ಹಾಗೂ ಕಾರ್ಯಾಚರಣೆಗೆ ಪ್ರಶಂಸನೀಯ ವ್ಯಕ್ತವಾಗಿದೆ.